ಪ್ರಧಾನಿ ಭೇಟಿ ವೇಳೆ ಇಸ್ರೇಲ್ ಪ್ರೇರಿತ ಸಿವಿಕ್ ಅ್ಯಪ್ ಪ್ರದರ್ಶನ
ಪ್ರಧಾನಿ ನರೇಂದ್ರ ಮೋದಿ ಜು.4 ರಂದು ಇಸ್ರೇಲ್ ಗೆ ಭೇಟಿ ನೀಡಲಿದ್ದಾರೆ. 2 ದಿನಗಳ ಭೇಟಿ ವೇಳೆ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಇಸ್ರೇಲ್ ಪ್ರೇರಿತ ಸಿವಿಕ್ ಅ್ಯಪ್ ಪ್ರದರ್ಶನಗೊಳ್ಳಲಿದೆ.

Published On :
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಜು.4 ರಂದು ಇಸ್ರೇಲ್ ಗೆ ಭೇಟಿ ನೀಡಲಿದ್ದಾರೆ. 2 ದಿನಗಳ ಭೇಟಿ ವೇಳೆ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಇಸ್ರೇಲ್ ಪ್ರೇರಿತ ಸಿವಿಕ್ ಅ್ಯಪ್ ಪ್ರದರ್ಶನಗೊಳ್ಳಲಿದೆ.
ಥಾಣೆ ನಗರದ ನಾಗರಿಕ ಸಂಸ್ಥೆಗಳ ವಿಷಯಗಳ ಬಗ್ಗೆ ಮಾಹಿತಿ ನೀಡುವ ಡಿಜಿಥಾಣೆ ಅ್ಯಪ್ ನ್ನು ಅಭಿವೃದ್ಧಿಪಡಿಸಲಾಗಿದ್ದು, ನಾಗಕರಿಕ ಆಡಳಿತ ಹಾಗೂ ಸ್ಥಳೀಯ ಉದ್ಯಮವನ್ನು ಉತ್ತೇಜಿಸಿ, ಉತ್ತಮಗೊಳಿಸಲು ನೆರವಾಗಲಿದೆ ಎಂದು ಥಾಣೆಯ ಮುನ್ಸಿಪಲ್ ಕಮಿಷನರ್ ಸಂಜೀವ್ ಜೈಸ್ವಾಲ್ ಹೇಳಿದ್ದಾರೆ.
2015 ರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ನಿಯೋಗ ಇಸ್ರೇಲ್ ಗೆ ಭೇಟಿ ನೀಡಿದ್ದಾಗ ಅಲ್ಲಿನ ಅ್ಯಪ್ ನಿಂದ ಪ್ರೇರಣೆ ಪಡೆದು, ಡಿಜಿಥಾಣೆ ಅ್ಯಪ್ ನ್ನು ಅಭೊವೃದೆಧಿಪಡಿಸಲಾಗಿದೆ. ಡಿಜಿಥಾಣೆ ಅ್ಯಪ್ ನ್ನು ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಭೇಟಿ ವೇಳೆ ಪ್ರದರ್ಶಿಸಲಾಗುತ್ತದೆ ಎಂದು ಮುಂಬೈ ನಲ್ಲಿರುವ ಇಸ್ರೇಲ್ ನ ಕೌನ್ಸಲ್ ಜನರಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


