ದೇಶ

ಜೂನ್ 30ರಂದು ಮಧ್ಯರಾತ್ರಿ ಹುಟ್ಟಿದ ಮಗುವಿಗೆ ಜಿಎಸ್ ಟಿ ಎಂದು ಹೆಸರಿಟ್ಟ ತಾಯಿ!

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಏಕಮಾತ್ರ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ...

ಜೂನ್ 30ರಂದು ಮಧ್ಯರಾತ್ರಿ ಹುಟ್ಟಿದ ಮಗುವಿಗೆ ಜಿಎಸ್ ಟಿ ಎಂದು ಹೆಸರಿಟ್ಟ ತಾಯಿ!
ಮಗುವಿನೊಂದಿಗೆ ಸಂತಸದಿಂದ ಸೆಲ್ಫಿ ತೆಗೆದುಕೊಳ್ಳುತ್ತಿರುವ ತಾಯಿ
Published On :
ಜೈಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಏಕಮಾತ್ರ ತೆರಿಗೆ ವ್ಯವಸ್ಥೆಯಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಬಗ್ಗೆಯೇ ಈಗ ಎಲ್ಲಿ ನೋಡಿದರಲ್ಲಿ ಚರ್ಚೆ. ಇದರ ಒಳಿತು ಕೆಡುಕುಗಳ ಬಗ್ಗೆ,  ನಿಯಮದ ಬಗ್ಗೆ ಸಾರ್ವಜನಿಕರು ಅಲ್ಲಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಇವುಗಳ ಮಧ್ಯೆ ಇಲ್ಲೊಬ್ಬರು ತಾಯಿ ಅಂದು ಹುಟ್ಟಿದ ತಮ್ಮ ಮಗುವಿಗೆ ಜಿಎಸ್ ಟಿ ಎಂದು ಹೆಸರಿಟ್ಟಿದ್ದಾರೆ.  
ಇದು ನಡೆದಿದ್ದು ರಾಜಸ್ತಾನದ ಬಿಇವಾದಲ್ಲಿ. ಮೊನ್ನೆ ಜೂನ್ 30  ಮಧ್ಯರಾತ್ರಿ 12 ಗಂಟೆ 2 ನಿಮಿಷಕ್ಕೆ ಗಂಡು ಮಗುವಿನ ಜನನವಾಯಿತು. ಜಿಎಸ್ ಟಿ ಜಾರಿಗೆ ಬಂದ ದಿನ ಹುಟ್ಟಿದ ಮಗುವಾದ್ದರಿಂದ ಅದಕ್ಕೆ ಜಿಎಸ್ ಟಿ ಎಂದು ಹೆಸರಿಡಲು ನಿರ್ಧರಿಸಿದ್ದಾರೆ ಮಗುವಿನ ತಾಯಿ.
ಈ ಬಗ್ಗೆ ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಟ್ವೀಟ್ ಮಾಡಿದ್ದಾರೆ. 
17 ವರ್ಷಗಳ ಚರ್ಚೆಗಳ ನಂತರ ಸ್ವಾತಂತ್ರ್ಯ ದಿನಾಚರಣೆ ನಂತರ ಭಾರತದ ಅತಿದೊಡ್ಡ ಸುಧಾರಣಾ ಕ್ರಮವಾದ ಜಿಎಸ್ ಟಿ ಮೊನ್ನೆ ಜೂನ್ 30ರಂದು ಮಧ್ಯರಾತ್ರಿ ಜಾರಿಗೆ ಬಂದಿದೆ.
ಸಂಸತ್ತಿನ ಐತಿಹಾಸಿಕ ಸೆಂಟ್ರಲ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಜಾರಿಗೆ ತರಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.