ಪಂಜಾಬ್: ರ್ಯಾಲಿ ವೇಳೆ ಸ್ಫೋಟ- 3 ಸಾವು, 15 ಜನರಿಗೆ ಗಾಯ
ಪಂಜಾಬ್ ರಾಜ್ಯದ ಬಂಟಿಂಡಾದಲ್ಲಿ ಪ್ರಬಲ ಕಾರು ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿ, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ...

ಮೌರ್ ಮಂಡಿ: ಪಂಜಾಬ್ ರಾಜ್ಯದ ಬಂಟಿಂಡಾದಲ್ಲಿ ಪ್ರಬಲ ಕಾರು ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿ, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಫೆಬ್ರವರಿ 4 ರಿಂದ ಪಂಜಾಬಿನಲ್ಲಿ ವಿಧಾನಸಭೆ ಚುನಾವಣಾ ಆರಂಭಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರ್ಮಿಂದರ್ ಜಸ್ಸಿ ಅವರು ಚುನಾವಣಾ ಪ್ರಚಾರ ಭಾಷಣ ಮಾಡುವುದರಲ್ಲಿ ನಿರತರಾಗಿದ್ದರು. ಸ್ಥಳದಲ್ಲಿ ಕಾಂಗ್ರೆಸ್ ನ ಹಲವಾರು ಕಾರ್ಯಕರ್ತರಿದ್ದರು. ಈ ವೇಳೆ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಮೌರ್ ಮಂಡಿ ಹಾಗೂ ಬಟಿಂಡಾದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿವಾದಿತ ಗುರು ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರ ಆಪ್ತ ಸಂಬಂಧಿಯಾಗಿರುವ ಜಸ್ಸಿ ಅವರ ಸಮಾವೇಶದ ಬಳಿ ಈ ದುರ್ಘಟನೆ ಸಂಭವಿಸಿದೆ.
ಪ್ರತ್ಯಕ್ಷದರ್ಶಿಗಳು ಹೇಳಿರುವ ಪ್ರಕಾರ, ಬಿಳಿ ಬಣ್ಣ ಮಾರುತಿ 800 ಕಾರು ಸ್ಥಳದಲ್ಲಿತ್ತು. ಕಾರು ನಿಂತು ಬಹಳ ಸಮಯವಾದರೂ ಯಾರೊಬ್ಬರೂ ಅದನ್ನು ತೆಗೆದುಕೊಂಡು ಹೋಗಲಿಲ್ಲ. ಹೀಗಾಗಿ ಕಾರನ್ನು ತೆಗೆದುಕೊಂಡು ಹೋಗುವಂತೆ ಮೈಕ್ ನಲ್ಲಿ ಹೇಳಲಾಗುತ್ತಿತ್ತು. ಇದಾದ ಕೆಲ ನಿಮಿಷಗಳಲ್ಲೇ ಕಾರು ಇದ್ದಕ್ಕಿದ್ದಂತೆ ಸ್ಪೋಟಗೊಂಡಿತು ಎಂದು ಹೇಳಿದ್ದಾರೆ.
ಇನ್ನು ಕೆಲ ಪ್ರತ್ಯಕ್ಷದರ್ಶಿಗಳು ಹೇಳಿರುವ ಪ್ರಕಾರ, ಜಸ್ಸಿ ಅವರ ಕಾರಿನ ಮೇಲೂ ಕೆಲವರು ಗುಂಡಿನ ದಾಳಿ ನಡೆಸಿದ್ದರು. ಸ್ಫೋಟಗೊಂಡ ಬಳಿಕ ಸ್ಥಳದಲ್ಲಿ ಪ್ರೆಷರ್ ಕುಕ್ಕರ್, ಕಬ್ಬಿಣದ ವಸ್ತುಗಳು ಹಾಗೂ ಇನ್ನಿತರೆ ಸ್ಫೋಟಕ ಸಾಮಾಗ್ರಿಗಳಿದ್ದವು ಎಂದು ಹೇಳಿದ್ದಾರೆ.
ಸ್ಫೋಟ ಸಂಭವಿಸುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದ ಪೊಲೀಸರು ತನಿಖೆ ಆರಂಭಿಸಿದ್ದಾರೆ, ಘಟನೆ ಹಿಂದೆ ಉಗ್ರರ ಕೈವಾಡ ಬಗ್ಗೆ ಯಾವುದೇ ಶಂಕೆಗಳನ್ನು ವ್ಯಕ್ತಪಡಿಸಿಲ್ಲ. ಪಂಜಾಬ್ ರಾಜ್ಯದಲ್ಲಿ ಇನ್ನು ವಿಧಾನಸಭಾ ಚುನಾವಣೆ ಆರಂಭಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿಯಿದ್ದು. ಇದಕ್ಕೂ ಮುನ್ನವೇ ಈ ರೀತಿಯ ಘಟನೆ ನಡೆದಿರುವುದು ಜನತೆಯಲ್ಲಿ ಆತಂಕವನ್ನುಂಟು ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


