ವಾರ್ಡನ್ ಪೈಶಾಚಿಕ ಕೃತ್ಯ; ಶೌಚಾಲಯ ಸ್ವಚ್ಛಗೊಳಿಸಲಿಲ್ಲ ಎಂದು ವಿದ್ಯಾರ್ಥಿಗೆ ಬೆಂಕಿ!
ಹಾಸ್ಟೆಲ್ ನ ಶೌಚಾಲಯವನ್ನು ಸರಿಯಾಗಿ ಸ್ವಚ್ಛಗೊಳಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ದೂರ್ತ ವಾರ್ಡನ್ ಓರ್ವ 14 ವರ್ಷದ ವಿದ್ಯಾರ್ಥಿಯನ್ನು ಸಜೀವಾಗಿ ದಹಿಸಲು ಯತ್ನಿಸಿದ ಪೈಶಾಚಿಕ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

ವಿಜಯವಾಡ: ಹಾಸ್ಟೆಲ್ ನ ಶೌಚಾಲಯವನ್ನು ಸರಿಯಾಗಿ ಸ್ವಚ್ಛಗೊಳಿಸಲಿಲ್ಲ ಎಂಬ ಒಂದೇ ಕಾರಣಕ್ಕೆ ದೂರ್ತ ವಾರ್ಡನ್ ಓರ್ವ 14 ವರ್ಷದ ವಿದ್ಯಾರ್ಥಿಯನ್ನು ಸಜೀವಾಗಿ ದಹಿಸಲು ಯತ್ನಿಸಿದ ಪೈಶಾಚಿಕ ಘಟನೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ವಿಜಯವಾಡದ ಕೊಂಡೂರು ಮಂಡಲದ ಮಾರೇಪಲ್ಲಿ ಪ್ರಾಂತ್ಯದಲ್ಲಿರುವ ಮದರ್ ತೆರೆಸಾ ಅನಾಥಾಶ್ರಮದಲ್ಲಿ ವ್ಯಾಸಂಗ ಮಾಡುತ್ತಿರುವ 14 ವರ್ಷದ ವಿದ್ಯಾರ್ಥಿ ವೇಂಪಟಿ ಪ್ರವೀಣ್ ಎಂಬ ಬಾಲಕ ಇದೀಗ ಶೇ.70ರಷ್ಟು ಸುಟ್ಟ ಗಾಯಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಜನವರಿ 26ರಂದು ಗಣರಾಜ್ಯೋತ್ಸವ ದಿನಾಚರಣೆಯಂದು ಆಶ್ರಮದ ಶೌಚಾಲವನ್ನು ಸ್ವಚ್ಛಗೊಳಿಸಲು ವಿದ್ಯಾರ್ಥಿ ಪ್ರವೀಣ್ ಗೆ ವಾರ್ಡನ್ ಕಾಟೂರಿ ವೆಂಕಟೇಶ್ವರ ರಾವ್ ಎಂಬಾತ ಸೂಚಿಸಿದ್ದ. ಆದರೆ ಇದಕ್ಕೆ ವಿದ್ಯಾರ್ಥಿ ಪ್ರವೀಣ್ ನಿರಾಕರಸಿದ್ದ. ಇದರಿಂತ ತೀವ್ರ ಕೋಪಗೊಂಡ ವಾರ್ಡನ್ ವೆಂಕಟೇಶ್ವರ ರಾವ್ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯ ಕೆನ್ನಾಲಿಗೆಯಲ್ಲಿ ಬಳಲುತ್ತಿದ್ದ ಪ್ರವೀಣ್ ತನ್ನನ್ನು ರಕ್ಷಿಸುವಂತೆ ಗೋಗರೆದಿದ್ದಾನೆ. ಈ ವೇಳೆ ವಾರ್ಡನ್ ಆತ್ಮಹತ್ಯೆಗೆ ತಾನೇ ಯತ್ನಿಸಿರುವಂತೆ ಹೇಳು. ನಿನ್ನ ರಕ್ಷಿಸುತ್ತೇನೆ ಎಂದು ಹೇಳಿಕೆ ಪಡೆಯಲು ಯತ್ನಿಸಿದ್ದಾನೆ.
ಪರಿಸ್ಥಿತಿ ಕೈ ಮೀರುತ್ತಿದೆ ಎಂದು ತಿಳಿದ ಸಹಪಾಠಿಗಳು ಹಾಗೂ ವಾರ್ಡನ್ ವೆಂಕಟೇಶ್ವರ ರಾವ್ ಕೂಡಲೇ ಸ್ಥಳೀಯ ಕ್ಲಿನಿಕ್ ವೊಂದಕ್ಕೆ ಪ್ರವೀಣ್ ರನ್ನು ದಾಖಲಿಸಿದ್ದಾರೆ. ಆದರೆ ಅಲ್ಲಿ ವೈದ್ಯರು ಇಲ್ಲದ ಕಾರಣ ಪ್ರವೀಣ್ ನನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಸ್ತುತ ಪ್ರವೀಣ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಸಾವು-ನೋವಿನ ನಡುವೆ ಹೋರಾಡುತ್ತಿದ್ದಾನೆ.
ಈ ಬಗ್ಗೆ ಹೇಳಿಕೆ ನೀಡಿರುವ ಪ್ರವೀಣ್ ಸಹೋದರ ಸಂಬಂಧಿ ವಾರ್ಡನ್ ಬೇಕೆಂದೇ ಪ್ರವೀಣ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು ಎಂದು ಹೇಳಿಕೆ ನೀಡಿದ್ದಾನೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದೂರ್ತ ವಾರ್ಡನ್ ನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


