ದೇಶ

ಉಗ್ರ ಹಫೀಜ್ ಸೈಯೀದ್ ಗೃಹ ಬಂಧನ: ಪೂರಕ ಸಾಕ್ಷ್ಯಾಧಾರ ನೀಡುವಂತೆ ಪಾಕ್‌ಗೆ ಭಾರತ

ಮುಂಬೈ ದಾಳಿ ರೂವಾರಿ, ಪಾಕಿಸ್ತಾನದ ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ರನ್ನು ಗೃಹಬಂಧನದಲ್ಲಿ ಇಡಲಾಗಿದೆ ಎಂದು ಪಾಕ್ ಪತ್ರಿಕೆಗಳಲ್ಲಿ...

ಉಗ್ರ ಹಫೀಜ್ ಸೈಯೀದ್ ಗೃಹ ಬಂಧನ: ಪೂರಕ ಸಾಕ್ಷ್ಯಾಧಾರ ನೀಡುವಂತೆ ಪಾಕ್‌ಗೆ ಭಾರತ
ವಿಕಾಸ್ ಸ್ವರೂಪ್
Published On :
ನವದೆಹಲಿ: ಮುಂಬೈ ದಾಳಿ ರೂವಾರಿ, ಪಾಕಿಸ್ತಾನದ ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ರನ್ನು ಗೃಹಬಂಧನದಲ್ಲಿ ಇಡಲಾಗಿದೆ ಎಂದು ಪಾಕ್ ಪತ್ರಿಕೆಗಳಲ್ಲಿ ವರದಿಯಾಗಿದ್ದು ಇದು ನಂಬಲು ಸಾಧ್ಯವಿಲ್ಲ. ಈ ಸಂಬಂಧ ಪೂರಕ ಸಾಕ್ಷ್ಯಾಧಾರ ನೀಡುವಂತೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ. 
ಹಫೀಜ್ ಸಯೀದ್ ಸೇರಿದಂತೆ ನಾಲ್ವರನ್ನು ಗೃಹಬಂಧನದಲ್ಲಿ ಇಡಲಾಗಿದೆ ಎಂದು ಪಾಕಿಸ್ತಾನ ಪತ್ರಿಕೆಗಳು ವರದಿ ಮಾಡಿದ್ದು ಈ ಬಗ್ಗೆ ಗುಮಾನಿ ವ್ಯಕ್ತಪಡಿಸಿರುವ ವಿಕಾಸ್ ಸ್ವರೂಪ್. ಇಂತಹ ಕಸರತ್ತುಗಳನ್ನು ಪಾಕಿಸ್ತಾನ ಈ ಹಿಂದೆಯೂ ಮಾಡಿತ್ತು ಎಂದು ಹೇಳಿದ್ದಾರೆ. 
ಇದೇ ವೇಳೆ ನೈಜ ವಿಶ್ವಾಸಾರ್ಹ ಕಾರ್ಯಾಚರಣೆ ನಡೆದಿದ್ದರೆ ಅದು ಪಾಕಿಸ್ತಾನದ ಪ್ರಾಮಾಣಿಕತೆಯ ಸಾಕ್ಷ್ಯಾಧಾರವಾಗುತ್ತದೆ ಎಂದರು. ಹಫೀಜ್ ಸಯೀದ್ ನನ್ನು ಗೃಹಬಂಧನದಲ್ಲಿಡಲಾಗಿದೆ ಎಂಬ ವರದಿಗಳನ್ನು ಪಾಕಿಸ್ತಾನದ ವಿವಿಧ ಪತ್ರಿಕೆಗಳು ತಮ್ಮ ಮುಖಪುಟಗಳಲ್ಲಿ ಪ್ರಕಟಿಸಿವೆ. 
ಗೃಹ ಬಂಧನದಲ್ಲಿರುವ ಉಗ್ರ ಸಯೀದ್ 2008ರ 26/11 ಮುಂಬೈದಾಳಿಯ ಪ್ರಮುಖ ರುವಾರಿಯಾಗಿದ್ದು, ಭಾರತ-ಅಮೆರಿಕಾ ರಾಷ್ಟ್ರಗಳಿಗೆ ಬೇಕಿರುವ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದಾನೆ. ಮುಂಬೈ ದಾಳಿಯಲ್ಲಿ ಹಲವಾರು ಅಮಾಯಕ ಜೀವಗಳ ಸಾವಿಗೆ ಕಾರಣನಾಗಿದ್ದ ಸಯೀದ್ ನನ್ನು ವಿಶ್ವ ಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಯಲ್ಲಿ ಸೇರಿಸುವಂತೆ ಭಾರತ ಈ ಹಿಂದಿನಿಂದಲೂ ಆಗ್ರಹಿಸುತ್ತಲೇ ಬಂದಿದ್ದರೂ, ಪಾಕಿಸ್ತಾನ ಮಾತ್ರ ಆತನನ್ನು ರಕ್ಷಿಸುವ ತನ್ನ ಪ್ರಯತ್ನವನ್ನು ಮುಂದುವರೆಸುತ್ತಲೇ ಬಂದಿತ್ತು. ಇದೀಗ ಪಾಕಿಸ್ತಾನ ಸರ್ಕಾರವೇ ಹಫೀಜ್'ಗೆ ಗೃಹಬಂಧನದಲ್ಲಿ ಇರಿಸಿರುವ ಹಿನ್ನಲೆ ಈ ಬಗ್ಗೆ ಪಾಕಿಸ್ತಾನ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ನಡೆಯುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.