ಪೋಲಿಯೊ ಲಸಿಕೆ ಹಾಕಿಸಿದ ಗಂಟೆಯೊಳಗೆ 5 ತಿಂಗಳ ಮಗು ಸಾವು
ಪಲ್ಸ್ ಪೋಲಿಯೊ ಲಸಿಕೆ ಹಾಕಿಸಿದ ಒಂದು ಗಂಟೆಯೊಳಗೆ 5 ತಿಂಗಳ ಹೆಣ್ಣುಮಗು ಸಾವನ್ನಪ್ಪಿರುವ ಘಟನೆ ..

ವಿಝಿನಗರಮ್: ಪಲ್ಸ್ ಪೋಲಿಯೊ ಲಸಿಕೆ ಹಾಕಿಸಿದ ಒಂದು ಗಂಟೆಯೊಳಗೆ 5 ತಿಂಗಳ ಹೆಣ್ಣುಮಗು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಪುಷ್ಪಾಪತಿಪಲೇಮ್ ನಲ್ಲಿ ನಡೆದಿದೆ.
ಕೂಲಿ ಕೆಲಸ ಮಾಡುವ ಗೆಟ್ಟಯ್ಯ ಮತ್ತು ಸ್ವಾತಿ ದಂಪತಿಯ ಮಗು ಧರಣಿ ಮೃತ ಮಗು. ಬೆಳಗ್ಗೆ 10 ಗಂಟೆ ಸುಮಾರಿಗೆ ರೆಲ್ಲಿವಾಸ್ಲಾ ಬೂತ್ ನಲ್ಲಿ ಮಗುವಿಗೆ ಲಸಿಕೆ ಹಾಕಿಸಲಾಗಿದೆ. ಸ್ವಲ್ಪ ಸಮಯದ ನಂತರ ತಾಯಿ ಮಗುವಿಗೆ ಎದೆ ಹಾಲು ನೀಡಿದ್ದಾರೆ. ಒಂದು ನಿಮಿಷದ ಬಳಿಕ ಮಗು ವಾಂತಿ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕೂಡಲೇ ಮಗುವನ್ನು ಸ್ಥಳೀಯ ಪ್ರಾಥಮಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಕೂಡಲೇ ಪೋಷಕರು ಮಗುವನ್ನು ಬೋಗಪುರಂ ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದಾರೆ. ಪರೀಕ್ಷಿಸಿದ ವೈದ್ಯರು ಮಗು ಸತ್ತಿರುವ ವಿಷಯ ತಿಳಿಸಿದ್ದಾರೆ.
ಉಸಿರಾಟದ ತೊಂದರೆಯಿಂದಾಗಿ ಮಗು ಸಾವನ್ನಪ್ಪಿರಬಹುದು ಎಂದು ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ಪದ್ಮಜಾ ತಿಳಿಸಿದ್ದಾರೆ.
ಲಸಿಕೆ ಹಾಕಿಸುವ ವೇಳೆ ಮಗುವಿಗೆ ಸ್ವಲ್ಪ ಜ್ವರ ಇತ್ತು. ಹೀಗಾಗಿ ಪೋಲಿಯೋ ಲಸಿಕೆ ಹಾಕಿಸಿದ ನಂತರ ಅರ್ಧಗಂಟೆ ಮಗುವಿನ ಪರಿಸ್ಥಿತಿಯನ್ನು ಅವಲೋಕಿಸಲಾಗಿತ್ತು, ಬಳಿಕ ಮಗುವನ್ನು ಪೋಷಕರ ಜೊತೆ ಮನೆಗೆ ಕಳುಹಿಸಲಾಗಿತ್ತು.
ಮನೆಗೆ ಬಂದ ನಂತರ ತಾಯಿ ಮಗುವಿಗೆ ಎದೆ ಹಾಲು ನೀಡಿದ್ದಾರೆ. ಒಂದು ನಿಮಿಷದ ಬಳಿಕ ಮಗು ವಾಂತಿ ಮಾಡಿಕೊಂಡಿದೆ. ಕೂಡಲೇ ಪೋಷಕರು ಪೊಲಿಯೋ ಬೂತ್ ಗೆ ಬಂದು ವಿಷಯ ತಿಳಿಸಿದ್ದಾರೆ. ಅವರ ಜೊತೆ ಸ್ಟಾಫ್ ನರ್ಸ್ ಕಳುಹಿಸಲಾಯಿತು. ಮಗುವನ್ನು ಪರೀಕ್ಷಿಸಿದ ಬಳಿಕ ಮಗುವನ್ನು ಸ್ಥಳೀಯ ಪ್ರಾಥಮಿಕ ಆಸ್ರತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಮಗುನ್ನು ಪರೀಕ್ಷೆ ಮಾಡಿದ ವೈದ್ಯರು, ಎಮರ್ಜೆನ್ಸಿ ಇಂಜೆಕ್ಷನ್ ನೀಡಿ, ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಹರಿಣಿಯನ್ನು ಅಲ್ಲಿ ಪರೀಕ್ಷಿಸಿದ ಮಕ್ಕಳ ವೈದ್ಯರು ಆಕೆ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ನರ್ಸ್ ಹೇಳುವ ಪ್ರಕಾರ ಮಗುವಿನ ಪೋಷಕರು ಶನಿವಾರ ರೇಷನ್ ತರಲು ಹೋಗಿ ಅಲ್ಲಿ ತುಂಬಾ ಹೊತ್ತಿನ ತನಕ ಬಿಸಿಲಿನಲ್ಲಿ ಕಾಯಿಸಿದ್ದಾರೆ, ಹೀಗಾಗಿ ಮಗುವಿಗೆ ತುಂಬಾ ಜ್ವರವಿತ್ತು. ಎಂದು ಹೇಳಿದ್ದಾರೆ.
ಲಸಿಕೆ ಹಾಕುವ ವೇಳೆ ಮಗುವಿಗೆ ಸ್ವಲ್ಪ ಪ್ರಮಾಣದ ಜ್ವರವಿತ್ತು ಎಂದು ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ಇದೇ ಬೂತ್ ನಲ್ಲಿ ಸುಮಾರು 88 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲಾಗಿದೆ. ಹರಿಣಿಗೆ ಹಾಕಿದ ಪೋಲಿಯೋ ಹನಿಯಿದ್ದ ಬಾಟಲ್ ಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


