ಪುಣೆ: ವೈರ್ ಬಿಗಿದು ಕೇರಳ ಮೂಲದ ಇನ್ಫೋಸಿಸ್ ಟೆಕ್ಕಿಯ ಬರ್ಬರ ಹತ್ಯೆ
ಕೇರಳ ಮೂಲಕ ಇನ್ಫೋಸಿಸ್ ಮಹಿಳಾ ಟೆಕ್ಕಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಪುಣೆಯ ಹಿಂಜೆವಾಡಿ ಐಟಿ ಪಾರ್ಕ್ ಕ್ಯಾಂಪಸ್ ನಲ್ಲಿರುವ ಇನ್ಪೋಸಿಸ್ ಕಚೇರಿಯಲ್ಲಿ ಭಾನುವಾರ ನಡೆದಿದೆ...

ಪುಣೆ: ಕೇರಳ ಮೂಲಕ ಇನ್ಫೋಸಿಸ್ ಮಹಿಳಾ ಟೆಕ್ಕಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಪುಣೆಯ ಹಿಂಜೆವಾಡಿ ಐಟಿ ಪಾರ್ಕ್ ಕ್ಯಾಂಪಸ್ ನಲ್ಲಿರುವ ಇನ್ಪೋಸಿಸ್ ಕಚೇರಿಯಲ್ಲಿ ಭಾನುವಾರ ನಡೆದಿದೆ.
ಕೆ. ರಾಸಿಲಾ ರಾಜು (23) ಹತ್ಯೆಯಾದ ಕೇರಳ ಮೂಲದ ಸಾಫ್ಚ್ ವೇರ್ ಇಂಜಿನಿಯರ್ ಹತ್ಯೆಯಾದ ಮಹಿಳೆಯೆಂದು ಗುರ್ತಿಸಲಾಗಿದೆ. ಕಂಪನಿಯಲ್ಲಿ ಸೆಕ್ಯುರಿ ಗಾರ್ಡ್ ಆಗಿರುವ ಬಾಬಿನ್ (26) ಎಂಬಾತನೇ ಮಹಿಳೆಯನ್ನು ಹತ್ಯೆ ಮಾಡಿದ್ದಾನೆಂದು ಹೇಳಲಾಗುತ್ತಿದ್ದು, ಕಂಪ್ಯೂಟರ್ ವೈರ್ ಬಳಸಿ ಟೆಕ್ಕಿಯನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಆರೋಪಿ ಬಾಬಿನ್ ನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದು, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಬಾಬಿನ್ ರಾಸಿಲಾ ಅವರ ಕೊಠಡಿಯೊಳಗೆ ಹೋಗಿರುವುದು ಕಂಡು ಬಂದಿದೆ. ಭಾನುವಾರ ರಜೆ ಇದ್ದರಿಂದ ರಾಸಿಲಾ ಅವರು ಕಟ್ಟಡ 9ನೇ ಮಹಡಿಯ ಕೊಠಡಿಯಲ್ಲಿ ಒಬ್ಬರೇ ಕೆಲಸ ಮಾಡುತ್ತಿದ್ದರು. ಈ ವೇಳೆ ಬಾಬಿನ್ ಕೊಠಡಿಯೊಳಗೆ ಹೋಗಿದ್ದಾರೆ. ಘಟನೆ ಸಂಜೆ 5 ಸುಮಾರಿಗೆ ನಡೆದಿರಬಹುದು. ನಮಗೆ ರಾತ್ರಿ 8 ಗಂಟೆಗೆ ಮಾಹಿತಿ ತಿಳಿದುಬಂದಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರು ಕಚೇರಿಯಲ್ಲಿರುವ ಸಹೋದ್ಯೋಗಗಳೊಂದಿಗೆ ರಾಸಿನಾ ಅವರು ನಿನ್ನೆ ಪ್ರಾಜೆಕ್ಟ್ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ದುಷ್ಕರ್ಮಿ ಹತ್ಯೆ ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ರಾತ್ರಿ ವೇಳೆ ಕಂಪನಿಯ ಮ್ಯಾನೇಜರ್ ರಾಸಿಲಾ ಅವರಿಗೆ ಕರೆ ಮಾಡಿದ್ದಾರೆ. ಆದರೆ, ಈ ವೇಳೆ ಯಾವುದೇ ಪ್ರತಿಕ್ರಿಯೆಗಳು ಬಾರದ ಹಿನ್ನಲೆಯಲ್ಲಿ ಭದ್ರತಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಭದ್ರತಾ ಸಿಬ್ಬಂದಿಗಳು ಕೊಠಡಿಯೊಳಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.
6.30ರ ಸುಮಾರಿಗೆ ಕೆಲಸ ಮುಗಿಸಿದ ಬಾಬಿನ್ ನಂತರ ಮನೆಗೆ ಹೋಗಿದ್ದಾನೆ. ಅಲ್ಲಿದೇ ನೇರವಾಗಿ ಮುಂಬೈಗೆ ತೆರಳಿದ ಆತ ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ ಮುಂಬೈನ ಸಿಎಸ್ಟಿ ರೈಲ್ವೆ ನಿಲ್ದಾಣದ ಬಳಿ ಆತನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ತನ್ನ ಊರಿಗೆ ಹೋಗಿ ಪರಾರಿಯಾಗಲು ಯತ್ನಿಸುತ್ತಿದ್ದ ರಾಸಿಲಾ ಅವರು ಕಚೇರಿಯಲ್ಲಿದ್ದಾಗ ಈತನೊಬ್ಬನೇ ಕೊಠಡಿಯೊಳಗೆ ಹೋಗಿ ಬಂದಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ. ಈ ಆಧಾರದ ಮೇಲೆ ಈತನೇ ಕೊರೆ ಮಾಡಿದ್ದಾನೆಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಬಾಬಿನ್ ನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸಿಪಿ ವೈಶಾಲಿ ಜಾಧವ್ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


