ಹಣ ಮಾಡಲು ರಾಜಕೀಯಕ್ಕೆ ಬಂದೆ: ಉತ್ತರ ಪ್ರದೇಶ ಸ್ವತಂತ್ರ್ಯಅಭ್ಯರ್ಥಿ ಆಘಾತಕಾರಿ ಹೇಳಿಕೆ
ಹಣ ಮಾಡುವ ಉದ್ದೇಶದಿಂದ ರಾಜಕೀಯ ಪ್ರವೇಶಿಸಿದ್ದಾಗಿ ಉತ್ತರ ಪ್ರದೇಶ ವಿಧಾನಯ ಸಭೆ ಚುನಾವಣೆಯ ಸ್ವತಂತ್ರ್ಯ ಅಭ್ಯರ್ಥಿಯೊಬ್ಬರು ನೀಡಿರುವ ಹೇಳಿಕೆ ವಿಡಿಯೋ ...

Published On :
ಆಗ್ರಾ :ಹಣ ಮಾಡುವ ಉದ್ದೇಶದಿಂದ ರಾಜಕೀಯ ಪ್ರವೇಶಿಸಿದ್ದಾಗಿ ಉತ್ತರ ಪ್ರದೇಶ ವಿಧಾನಯ ಸಭೆ ಚುನಾವಣೆಯ ಸ್ವತಂತ್ರ್ಯ ಅಭ್ಯರ್ಥಿಯೊಬ್ಬರು ನೀಡಿರುವ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆಗ್ರಾದ ಸ್ವತಂತ್ರ್ಯ ಅಭ್ಯರ್ಥಿಯಾಗಿರುವ ಚೌಧುರಿ ಹೇಳಿಕೆ ಪರೋಕ್ಷವಾಗಿ ಎಲ್ಲರೂ ಹಣ ಮಾಡಲು ರಾಜಕೀಯಕ್ಕೆ ಬಂದಿದ್ದಾರೆ ಎಂಬುದನ್ನು ಸೂಚಿಸುತ್ತಿದೆ. ಹಣ ಮಾಡಲು ರಾಜಕೀಯಕ್ಕೆ ಬಂದ ರಾಜಕಾರಣಿಗಳನ್ನು ತಾವು ಅನುಸರಿಸುತ್ತಿರುವುದಾಗಿ ತಿಳಿಸಿದ್ದಾರೆ.
ಕೇವಲ ಹಣ ಮಾಡುವ ಒಂದೇ ಒಂದು ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದು, ಜನರನ್ನು ನಾನು ಮೂರ್ಖರನ್ನಾಗಿಸುವುದಾಗಿ ತಿಳಿಸಿದ್ದಾರೆ.
ಜನರನ್ನು ಮೂರ್ಖರನ್ನಾಗಿಸಿ ಪ್ರಧಾನಿ ದೇಶದ ಮುಖ್ಯಸ್ಥರಾಗಿದ್ದಾರೆ, ನಾನು ಕೂಡ ಹಾಗೆಯೇ ಎಂದು ಹೇಳಿರುವ ಅವರು, ಜನರನ್ನುಮೂರ್ಖರನ್ನಾಗಿಸಿ ಯಾರು ಬೇಕಾದರೂ ಪ್ರಧಾನಿಯಾಗಬಹುದು, ನನಗೂ ಕೂಡ ಆ ರೀತಿಯ ಪ್ರತಿಭೆಇದ್ದು, ನಾನು ಕೂಡ ಅವರುಗಳ ಹೆಜ್ಜೆಯನ್ನು ಅನುಸರಿಸುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ರಾಜಕೀಯmoneyಹಣSocial Mediaಸಾಮಾಜಿಕ ಮಾಧ್ಯಮಉತ್ತರ ಪ್ರದೇಶ ಚುನಾವಣೆUP pollsindependent candidate . politicsಸ್ವತಂತ್ರ್ಯ ಅಭ್ಯರ್ಥಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


