ದೇಶ

ಲೈಂಗಿಕ ಕಿರುಕುಳ ಆರೋಪ: ಮೇಘಾಲಯ ರಾಜ್ಯಪಾಲ ರಾಜಿನಾಮೆ

ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮೇಘಾಲಯ ರಾಜ್ಯಪಾಲ ವಿ.ಷಣ್ಮುಗನಾಥನ್‌ ಅವರು ಗುರುವಾರ ರಾತ್ರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ..

ಲೈಂಗಿಕ ಕಿರುಕುಳ ಆರೋಪ: ಮೇಘಾಲಯ ರಾಜ್ಯಪಾಲ ರಾಜಿನಾಮೆ
ವಿ.ಷಣ್ಮುಗನಾಥ್
Published On :

ನವದೆಹಲಿ: ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮೇಘಾಲಯ ರಾಜ್ಯಪಾಲ ವಿ.ಷಣ್ಮುಗನಾಥನ್‌ ಅವರು ಗುರುವಾರ ರಾತ್ರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಪಾಲ ವಿ.ಷಣ್ಮುಗನಾಥನ್‌ ಅವರ ವಿರುದ್ಧದ ಆರೋಪ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಗುರುವಾರ ಬೆಳಗ್ಗೆ ಮೇಘಾಲಯ  ಸರ್ಕಾರದ ವಿವರಣೆ ಕೋರಿದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿದ್ದಾರೆ.

ರಾಜಭವನದ ಘನತೆಗೆ ಧಕ್ಕೆಯಾಗುತ್ತಿರುವ ರೀತಿಯಲ್ಲಿ ಷಣ್ಮುಗನಾಥನ್‌ ಅವರು ನಡೆದುಕೊಳ್ಳುತ್ತಿದ್ದು, ಅವರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂದು ರಾಜಭವನದ 100ಕ್ಕೂ ಹೆಚ್ಚು ಸಿಬ್ಬಂದಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಮನವಿ ಮಾಡಿದ್ದರು.
 
67 ವರ್ಷದ ಷಣ್ಮುಗನಾಥನ್‌ ಅವರು ರಾಜಭವನದ ಘನತೆಗೆ ಚ್ಯುತಿ ತರುತ್ತಿದ್ದಾರೆ. ರಾಜಭವನವನ್ನು ಯುವತಿಯರ ಕ್ಲಬ್‌ ಆಗಿ ಪರಿವರ್ತನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು. ರಾಜಭವನದ ಸಿಬ್ಬಂದಿ ಆರೋಪಿಸಿದ್ದರು. ರಾಜಭವನವನ್ನು ಯುವತಿಯರ ಕ್ಲಬ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಯುವತಿಯರು ಬಂದು ಹೋಗುವ ಜಾಗವಾಗಿ ರಾಜಭವನ ಬದಲಾಗಿದೆ. ಬಹುತೇಕ ಯುವತಿಯರಿಗೆ ರಾಜ್ಯಪಾಲರ ಮಲಗುವ ಕೋಣೆಯವರೆಗೂ ಪ್ರವೇಶ ಇದೆ ಎಂದು ಅವರು ಆಪಾದಿಸಿದ್ದರು. ಷಣ್ಮುಗನಾಥನ್‌ ಅವರು ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಹುದ್ದೆಯೊಂದರ ಆಕಾಂಕ್ಷಿಯಾಗಿದ್ದು ರಾಜಭವನದಲ್ಲಿ ಸಂದರ್ಶನಕ್ಕೆ ಹೋಗಿದ್ದ ಮಹಿಳೆ ಆರೋಪಿಸಿದ್ದರು.

ಕಳೆದ ವರ್ಷ ಮೇ ತಿಂಗಳಲ್ಲಿ ವಿ.ಷಣ್ಮುಗನಾಥನ್‌ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿತ್ತು, ನಿನ್ನೆ ಅರುಣಾಚಲ ಪ್ರದೇಶದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಿಹಿಸಿದ್ದ ಅವರು ಕಾರ್ಯಕ್ರಮದ ನಂತರ ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಮೇಲೆ ರಾಜಿನಾಮೆ ನೀಡಿದ್ದಾರೆ.

ರಾಜಿನಾಮೆ ಪತ್ರದೊಂದಿಗೆ ಮೇಘಾಲಯ ಸರ್ಕಾರದ ಶಿಫಾರಸು ಪತ್ರ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.