ದೇಶ

ಅಗಸ್ಟಾ ವೆಸ್ಟ್ ಲ್ಯಾಂಡ್: ಸಿಬಿಐ ಅರ್ಜಿ ವಿಚಾರಣೆ ಫೆ.1ಕ್ಕೆ ಮುಂದೂಡಿಕೆ

ಅಗಸ್ತಾ ವೆಸ್ಟ್ ಲ್ಯಾಂಡ್ ಕೇಸಿಗೆ ಸಂಬಂಧಪಟ್ಟಂತೆ ಮಾಜಿ ಏರ್ ಚೀಫ್ ಎಸ್.ಪಿ.ತ್ಯಾಗಿ ಮತ್ತು ಇತರರ...

ಅಗಸ್ಟಾ ವೆಸ್ಟ್ ಲ್ಯಾಂಡ್: ಸಿಬಿಐ ಅರ್ಜಿ ವಿಚಾರಣೆ ಫೆ.1ಕ್ಕೆ ಮುಂದೂಡಿಕೆ
ಮಾಜಿ ಏರ್ ಚೀಫ್ ಎಸ್.ಪಿ.ತ್ಯಾಗಿ
Published On :
ನವದೆಹಲಿ: ಅಗಸ್ತಾ ವೆಸ್ಟ್ ಲ್ಯಾಂಡ್ ಕೇಸಿಗೆ ಸಂಬಂಧಪಟ್ಟಂತೆ ಮಾಜಿ ಏರ್ ಚೀಫ್ ಎಸ್.ಪಿ.ತ್ಯಾಗಿ ಮತ್ತು ಇತರರ ಜಾಮೀನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಬುಧವಾರ ಫೆಬ್ರುವರಿ 1ಕ್ಕೆ ಮುಂದೂಡಿದೆ.
ಈ ಹಿಂದೆ ಡೆಲ್ಲಿ ಹೈಕೋರ್ಟ್ ಇದೇ ಕೇಸಿಗೆ ಸಂಬಂಧಪಟ್ಟಂತೆ ಸಿಬಿಐ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮೊನ್ನೆ 18ರಂದು ಇಂದಿಗೆ(ಜ.25ಕ್ಕೆ) ಮುಂದೂಡಿತ್ತು.
ಸಿಬಿಐ ವಿಶೇಷ ನ್ಯಾಯಾಲಯ ಈ ಹಿಂದೆ ಜನವರಿ 4ರಂದು ಎಸ್.ಪಿ.ತ್ಯಾಗಿಯವರ ಸೋದರ ಸಂಜೀವ್ ತ್ಯಾಗಿ ಮತ್ತು ಅವರ ಪರ ವಕೀಲ ಗೌತಮ್ ಖೈತಾನ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.
ನಂತರ ಸಂಜೀವ್ ಮತ್ತು ಖೈತಾನ್ ಅವರಿಗೆ ಕೋರ್ಟ್, ಯಾವುದೇ ಸಾಕ್ಷಿಗಳನ್ನು ಸಂಪರ್ಕಿಸದಂತೆ ಮತ್ತು ಪೂರ್ವಾನುಮತಿಯಿಲ್ಲದೆ ದೆಹಲಿ ಬಿಡದಂತೆ ಆದೇಶ ನೀಡಿತ್ತು.
72 ವರ್ಷದ ಮಾಜಿ ಏರ್ ಚೀಫ್ ಎಸ್.ಪಿ.ತ್ಯಾಗಿಯವರು ಎಷ್ಟು ಲಂಚ ಸ್ವೀಕರಿಸಿದ್ದಾರೆ ಎಂದು ತಿಳಿಸಲು ವಿಫಲವಾಗಿದೆ ಎಂದು ಕಾರಣ ನೀಡಿ ನ್ಯಾಯಾಲಯ ಈ ಮುನ್ನ  ಅವರಿಗೆ ಜಾಮೀನು ನೀಡಿತ್ತು.
2007ರಲ್ಲಿ ಸೇವೆಯಿಂದ ನಿವೃತ್ತರಾದ ಎಸ್.ಪಿ.ತ್ಯಾಗಿ ಮತ್ತು ಅವರ ಸಂಬಂಧಿಕರಾದ ಸಂಜೀವ್ ಮತ್ತು ಖೈತಾನ್ 2016 ಡಿಸೆಂಬರ್ 9ರಂದು ಸಿಬಿಐನಿಂದ ಬಂಧಿತರಾಗಿದ್ದರು. ಯುಪಿಎ-2 ಸರ್ಕಾರದ ಅವಧಿಯಲ್ಲಿ ಇಂಗ್ಲೆಂಡ್ ಮೂಲದ ಕಂಪೆನಿಯಿಂದ 12 ವಿವಿಐಪಿ ಹೆಲಿಕಾಪ್ಟರ್ ಗಳ ಖರೀದಿಯಲ್ಲಿ ಅಕ್ರಮ ನಡೆಸಿದ್ದಾರೆ ಎಂಬ ಆರೋಪ ಅವರ ಮೇಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.