ದೇಶ

ಮೀಸಲಾತಿಯ ಅಗತ್ಯವಿದೆ: ಪರಿಕ್ಕರ್

ಇತ್ತೀಚಿಗಷ್ಟೇ ಆರ್ಎಸ್ಎಸ್ ನಾಯಕರೊಬ್ಬರು ಮೀಸಲಾತಿ ನೀತಿಯನ್ನು ಪರಿಶೀಲಿಸುವ ಅಗತ್ಯ ಇದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕೆಲವು...

ಮೀಸಲಾತಿಯ ಅಗತ್ಯವಿದೆ: ಪರಿಕ್ಕರ್
ಮನೋಹರ್ ಪರಿಕ್ಕರ್
Published On :
ಪಣಜಿ: ಇತ್ತೀಚಿಗಷ್ಟೇ ಆರ್ಎಸ್ಎಸ್ ನಾಯಕರೊಬ್ಬರು ಮೀಸಲಾತಿ ನೀತಿಯನ್ನು ಪರಿಶೀಲಿಸುವ ಅಗತ್ಯ ಇದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕೆಲವು ಕಡೆ ಮೀಸಲಾತಿ ದುರ್ಬಳಕೆಯಾಗುತ್ತಿದೆ ಎಂಬ ಆರೋಪ ಇದೆ. ಆದರೂ ಮೀಸಲಾತಿಯ ಅಗತ್ಯವಿದೆ ಅಂತ ನನಗೆ ಅನಿಸುತ್ತದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಮಂಗಳವಾರ ಹೇಳಿದ್ದಾರೆ.
ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಗೋವಾದಲ್ಲಿ ಇಂದು ಬಿಜೆಪಿ ಯುವ ಸಮ್ಮೇಳನ ಉದ್ದೇಶಿಸಿ ಮಾತನಾಡುತ್ತಿದ್ದ ಪರಿಕ್ಕರ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದು ಹೀಗೆ. 
ಗೋವಾದ ಪರಿಸ್ಥಿತಿ ಬೇರೆ. ಆದರೆ ದೇಶಾದ್ಯಂತ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಜೀವನ ಮಟ್ಟ ಇನ್ನೂ ಸುಧಾರಿಸಿಲ್ಲ. ಈಗ ಸುಧಾರಣೆ ಕಾಣುತ್ತಿದ್ದಾರೆ. ಮೀಸಲಾತಿ ದುರ್ಜಳೆಯಾಗುತ್ತಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಹಿಂದೂಳಿದವರನ್ನು ಸಾಮಾಜಿಕವಾಗಿ ಮೇಲೆ ತರಲು ಮೀಸಲಾತಿಯ ಅಗತ್ಯ ಇದೆ ಎಂದು ಹೇಳಿದ್ದಾರೆ.
ಕಳೆದ ಶುಕ್ರವಾರ ಆರ್ಎಸ್ಎಸ್ ಪ್ರಚಾರ ಮುಖ್ಯಸ್ಥ ಮನಮೋಹನ್ ವೈದ್ಯ ಅವರು, ಸ್ವತಃ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರೇ ಮೀಸಲಾತಿ ಮುಂದುವರೆಸುವುದರ ವಿರುದ್ಧವಾಗಿದ್ದರು. ಹೀಗಾಗಿ ಮೀಸಲಾತಿಯನ್ನು ಪರಿಶೀಲಿಸಬೇಕು ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.