ಸುಪ್ರೀಂಕೋರ್ಟ್‌ನಲ್ಲಿ ಕೊಳಕು ಪದ ಬಳಸಿ ನಿರ್ಬಂಧ ಶಿಕ್ಷೆಗೆ ಒಳಗಾದ ಕೇರಳ ವಕೀಲ
ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ವೇಳೆ ಕೇರಳ ಪರ ಹಾಜರಾದ ವಕೀಲರೊಬ್ಬರು ಕೊಳಕು ಪದ ಬಳಸಿದ ಘಟನೆ ನಡೆಸಿದೆ...

Published On :
ನವದೆಹಲಿ: ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ವೇಳೆ ಕೇರಳ ಪರ ಹಾಜರಾದ ವಕೀಲರೊಬ್ಬರು ಕೊಳಕು ಪದ ಬಳಸಿದ ಘಟನೆ ನಡೆಸಿದೆ.
ಕೇರಳ ವಕೀಲರ ಅಸಂಸದೀಯ ಪದ ಬಳಕೆ ಮಾಡಿದ್ದರಿಂದ ಕೆರಳಿದ ಮುಖ್ಯ ನ್ಯಾಯಾಧೀಶರು ವಕೀಲರಿಗೆ ಇಡೀ ದಿನ ವಿಚಾರಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧಿಸಿತು. ವಕೀಲ ವಿಕಾಸ್ ಸಿಂಗ್ ಪದೇ ಪದೇ ಕ್ಷಮೆ ಕೇಳಿದರೂ ನ್ಯಾಯಾಲಯ ಅದನ್ನು ಪರಿಗಣಿಸಲಿಲ್ಲ.
ವಿಚಾರಣೆ ವೇಳೆ ಸ್ವಹಿತಾಸಕ್ತಿ ಕುರಿತು ವಾದಿಸುತ್ತಿದ್ದ ವಿಕಾಸ್ ಸಿಂಗ್, ಲೋಧಾ ಸಮಿತಿ ಕೂಡ ಸ್ವಹಿತಾಸಕ್ತಿ ಎದುರಿಸುತ್ತಿದೆ. ಲೋಧಾ ಸಮಿತಿ ತನ್ನ ಸೇವೆಗೆ ಬಿಸಿಸಿಐನಿಂದ 3 ಕೋಟಿ ರುಪಾಯಿ ಪಡೆಯುತ್ತಿದೆ ಎಂದು ಹೇಳುತ್ತಿದ್ದರು. ವಾದದ ಭರದಲ್ಲಿ ಅತೀ ಕೊಳಕು ಪದವನ್ನು ಬಳಕೆ ಮಾಡಿದರು. ಇದರಿಂದ ಕೆರಳಿದ ನ್ಯಾಯಾಲಯ ಉತ್ತರಪ್ರದೇಶದ ಜಿಲ್ಲಾ ನ್ಯಾಯಾಲಯದಲ್ಲೂ ಇಂತಹ ಪದಗಳನ್ನು ಬಳಸುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


