ದೇಶ

ಮುಸ್ಲಿಂ ಮತದಾರರು ಬುದ್ದಿವಂತಿಕೆಯಿಂದ ಮತ ಹಾಕುವಂತೆ ಮಾಯಾವತಿ ಮನವಿ

ಬಿಜೆಪಿಯನ್ನು ಸೋಲಿಸಲು ಮುಸಲ್ಮಾನ ಮತದಾರರು ಸಮಾಜವಾದಿ ಪಕ್ಷಕ್ಕೆ ಬದಲಾಗಿ...

ಮುಸ್ಲಿಂ ಮತದಾರರು ಬುದ್ದಿವಂತಿಕೆಯಿಂದ ಮತ ಹಾಕುವಂತೆ ಮಾಯಾವತಿ ಮನವಿ
ಬಿಎಸ್ಪಿ ನಾಯಕಿ ಮಾಯಾವತಿ
Published On :
ಲಕ್ನೋ: ಬಿಜೆಪಿಯನ್ನು  ಸೋಲಿಸಲು ಮುಸಲ್ಮಾನ ಮತದಾರರು ಸಮಾಜವಾದಿ ಪಕ್ಷಕ್ಕೆ ಬದಲಾಗಿ ಬಹುಜನ ಸಮಾಜವಾದಿ ಪಕ್ಷಕ್ಕೆ ಮತ ನೀಡಬೇಕೆಂದು ನಾಯಕಿ ಮಾಯಾವತಿ ಮನವಿ ಮಾಡಿದ್ದಾರೆ.
ಲಕ್ನೋದಲ್ಲಿಂದು ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಬಿಜೆಪಿಯನ್ನು ಸೋಲಿಸಲು ಎಸ್ಪಿಗೆ ಬದಲಾಗಿ ಬಿಎಸ್ಪಿಗೆ ಮತ ಚಲಾಯಿಸಬೇಕು. ಮುಸ್ಲಿಂ ಮತದಾರರು ಬುದ್ದಿವಂತಿಕೆಯಿಂದ ಮತ ಹಾಕುವಂತೆ ಮನವಿ ಮಾಡಿದರು.
ಬಿಜೆಪಿ ವಿರುದ್ಧ ಹರಿಹಾಯ್ದ ಅವರು, 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ್ಧ ಭರವಸೆಯಲ್ಲಿ 4ನೇ ಒಂದು ಭಾಗದಷ್ಟು ಆಶ್ವಾಸನೆಗಳನ್ನು ಕೂಡ ಪೂರೈಸಿಲ್ಲ. ಪ್ರಧಾನಿ ಮೋದಿಯವರು ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ.ನೋಟುಗಳ ಚಲಾವಣೆ ಹಿಂತೆಗೆತ ಕ್ರಮವನ್ನು ಟೀಕಿಸಿದ ಅವರು, ಜನರು ಇದಕ್ಕೆ ಸರಿಯಾದ ಪ್ರತ್ಯುತ್ತರ ನೀಡುತ್ತಾರೆ.
ಬಿಹಾರಕ್ಕಿಂತ ಹೆಚ್ಚು ಅಪಜಯವನ್ನು ಉತ್ತರ ಪ್ರದೇಶದಲ್ಲಿ ಜನರು ಕಾಣುತ್ತಾರೆ ಎಂದು ಅವರು ಹರಿಹಾಯ್ದರು.ಮೀಸಲಾತಿ ಕುರಿತು ಆರ್ಎಸ್ಎಸ್ ವಕ್ತಾರ ಮೋಹನ್ ವೈದ್ಯ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ಕುರಿತು ಪಕ್ಷದ ವಿರೋಧಿ ಭಾವನೆ ಈಗ ಜನತೆಗೆ ಗೊತ್ತಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.