ದೇಶ

ಶಿವಲಿಂಗಕ್ಕೆ ವಿಸ್ಕಿ ಕುಡಿಸುವ ದೃಶ್ಯ, ತೆಲುಗು ಸಿನಿಮಾ ನಿರ್ದೇಶಕನ ಬಂಧನ

ಸದ್ಯದಲ್ಲೇ ಬಿಡುಗಡೆಯಾಗಲಿರುವ ತೆಲುಗು ಚಿತ್ರವೊಂದರಲ್ಲಿ ಶಿವ ಲಿಂಗಕ್ಕೆ ವಿಸ್ಕಿ ಕುಡಿಸುವ ಹಾಗೂ ದೇವಸ್ಥಾನದಲ್ಲಿ ಅಗರಬತ್ತಿ ಬದಲು...

ಶಿವಲಿಂಗಕ್ಕೆ ವಿಸ್ಕಿ ಕುಡಿಸುವ ದೃಶ್ಯ, ತೆಲುಗು ಸಿನಿಮಾ ನಿರ್ದೇಶಕನ ಬಂಧನ
ಸಾಂದರ್ಭಿಕ ಚಿತ್ರ
Published On :
ಹೈದರಾಬಾದ್: ಸದ್ಯದಲ್ಲೇ ಬಿಡುಗಡೆಯಾಗಲಿರುವ ತೆಲುಗು ಚಿತ್ರವೊಂದರಲ್ಲಿ ಶಿವ ಲಿಂಗಕ್ಕೆ ವಿಸ್ಕಿ ಕುಡಿಸುವ ಹಾಗೂ ದೇವಸ್ಥಾನದಲ್ಲಿ ಅಗರಬತ್ತಿ ಬದಲು ಸಿಗರೇಟ್ ಹೊತ್ತಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಚಿತ್ರದ ನಿರ್ದೇಶಕರನ್ನು ತೆಲಂಗಾಣ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಹೊಸ ಕಲಾವಿದರು ಅಭಿನಯಿಸಿರುವ ದೇವುಡ ಚಿತ್ರದಲ್ಲಿ ಈ ದೃಶ್ಯಗಳಿದ್ದು, ಚಿತ್ರದ ನಿರ್ದೇಶಕ ದಾಸರಿ ಸಾಯಿರಾಮ್ ಹಾಗೂ ನಿರ್ಮಾಪಕ ಗಜ್ಜೆಲ ಹರಿ ಕುಮಾರ್ ರೆಡ್ಡಿ ಅವರನ್ನು ಇಂದು ಬಂಧಿಸಲಾಗಿದೆ.
ಶಿವಲಿಂಗಕ್ಕೆ ವಿಸ್ಕಿ ಕುಡಿಸುವ ದೃಶ್ಯ ತೋರಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ನೀಡಿದ್ದ ದೂರಿನ ಆಧಾರದ ಮೇಲೆ ತೆಲಂಗಾಣ ಪೊಲೀಸರು ಆಂಧ್ರಪ್ರದೇಶದ ತೆನಾಲಿ ಮೂಲದ ನಿರ್ದೇಶಕನನ್ನು ಹಾಗೂ ಕಡಪಾ ಮೂಲದ ನಿರ್ಮಾಪಕನನ್ನು ವಶಕ್ಕೆ ಪಡೆದಿದ್ದಾರೆ.
ಈ ಇಬ್ಬರು ಆರೋಪಿಗಳ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.