ವಾಯು ಮಾಲಿನ್ಯದಿಂದಾಗಿ ದೆಹಲಿ, ಮತ್ತು ಮುಂಬಯಿಗಳಲ್ಲಿ 81 ಸಾವಿರ ಸಾವು
ದೆಹಲಿ ಮತ್ತು ಮುಂಬಯಿ ಮಹಾನಗರಗಳಲ್ಲಿ ವಾಯುಮಾಲಿನ್ಯದಿಂದಾಗಿ 2015ಲ್ಲಿ 30 ವರ್ಷಮೇಲ್ಪಟ್ಟ 80,665 ಮಂದಿ ಅಕಾಲಿಕವಾಗಿ ಮೃತಪಟ್ಟಿದ್ದಾರೆ ..

ನವದೆಹಲಿ: ದೆಹಲಿ ಮತ್ತು ಮುಂಬಯಿ ಮಹಾನಗರಗಳಲ್ಲಿ ವಾಯುಮಾಲಿನ್ಯದಿಂದಾಗಿ 2015ಲ್ಲಿ 30 ವರ್ಷಮೇಲ್ಪಟ್ಟ 80,665 ಮಂದಿ ಅಕಾಲಿಕವಾಗಿ ಮೃತಪಟ್ಟಿದ್ದಾರೆ ಅಧ್ಯಯನವೊಂದು ತಿಳಿಸಿದೆ.
ದೆಹಲಿ ಮತ್ತು ಮುಂಬಯಿ ನಗರಗಳಲ್ಲಿ ಕಳೆದ ವರ್ಷ ವಾಯುಮಾಲಿನ್ಯದ ಕಾರಣಕ್ಕಾಗಿ ಆಗಿರುವ ವೆಚ್ಚ 70,000 ಕೋಟಿ ರೂ. ಇದು ದೇಶಿಯ ಒಟ್ಟು ಉತ್ಪಾದನೆಯ 0.71% ರಷ್ಟು ಆಗಿದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ ಅಧ್ಯಯನ ವರದಿ ತಿಳಿಸಿದೆ.
ವಾತಾವರಣದಲ್ಲಿರುವ ಮಾರಕ ವಾಯುಕಣದ ಪ್ರಮಾಣ ಹತ್ತು ಮೈಕ್ರಾನ್‌ಗಳಷ್ಟಿದೆ ಎಂದು ಸಂಶೋಧಕರು ಹೇಳಿದ್ದಾರೆ. ದಿಲ್ಲಿಯಲ್ಲಿ ವಾಹನ ಹೊರ ಸೂಸುವ ಹೊಗೆ, ನಿರ್ಮಾಣ ಕಾಮಗಾರಿ ಧೂಳು ಮತ್ತು ಇತರ ಕೈಗಾರಿಕಾ ಮಾಲಿನ್ಯಕಾರಕ ಕಣಗಳಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಕಾಲಿಕ ಮರಣಗಳು ಸಂಭವಿಸಿವೆ. 1995ರಲ್ಲಿ ಇಂಥ ಮರಣ ಪ್ರಮಾಣ ದಿಲ್ಲಿಯಲ್ಲಿ 19,716 ರಷ್ಟಿತ್ತು, 2015ರ ವೇಳೆಗೆ ಇದು 48,651ಕ್ಕೆ ಏರಿಕೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


