ಸಿಧು 'ಮಾನವ ಬಾಂಬ್' ಇದ್ದಂತೆ: ಸುಖ್ಬೀರ್ ಬಾದಲ್
ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಂಸದ ನವಜೋತ್ ಸಿಂಗ್ ಸಿಧು ಅವರು 'ಮಾನವ ಬಾಂಬ್' ಇದ್ದಂತೆ ಎಂದು ಪಂಜಾಬ್ ರಾಜ್ಯದ ಉಪ ಮುಖ್ಯಮಂತ್ರಿ ಸುಖ್ಬೀರ್ ಬಾದಲ್ ಅವರು ಸೋಮವಾರ...

ಲುಧಿಯಾನಾ: ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಂಸದ ನವಜೋತ್ ಸಿಂಗ್ ಸಿಧು ಅವರು 'ಮಾನವ ಬಾಂಬ್' ಇದ್ದಂತೆ ಎಂದು ಪಂಜಾಬ್ ರಾಜ್ಯದ ಉಪ ಮುಖ್ಯಮಂತ್ರಿ ಸುಖ್ಬೀರ್ ಬಾದಲ್ ಅವರು ಸೋಮವಾರ ಹೇಳಿದ್ದಾರೆ.
ನವಜೋತ್ ಸಿಂಗ್ ಸಿಧು ವಿರುದ್ಧ ಕಿಡಿಕಾಡಿರುವ ಸುಖ್ಬೀರ್ ಬಾದಲ್ ಅವರು, ಸಿಧು ಅವರು 'ಮಾನವ ಬಾಂಬ್' ಇದ್ದಂತೆ. ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದು. ಇದರಿಂದ ಸಾಕಷ್ಟು ಹಾನಿಯುಂಟಾಗಲಿದೆ. ಸಿಧು ಅವರಿಗೆ ಸಾಕಷ್ಟು ಅಹಂಕಾರವಿದ್ದು, 6 ತಿಂಗಳೊಳಗಾಗಿ ಅವರು ಕಾಂಗ್ರೆಸ್ ತೊರೆದು, ರಾಹುಲ್ ವಿರುದ್ಧ ಮಾತನಾಡುತ್ತಾರೆಂಬುದಕ್ಕೆ ನಾನು ಖಾತರಿಕೊಡುತ್ತೇನೆಂದು ಹೇಳಿದ್ದಾರೆ.
ನಿನ್ನೆಯಷ್ಟೇ ಕಾಂಗ್ರೆಸ್ ಗೆ ಸೇರ್ಪಡೆ ಗೊಂಡಿದ್ದ ನವಜೋತ್ ಸಿಂಗ್ ಸಿಧು ಅವರು, ಸುಖ್ಬೀರ್ ಬಾದಲ್ ವಿರುದ್ದ ಕೆಂಡ ಕಾರಿದ್ದರು. ಸರ್ಕಾರ ರಾಜ್ಯವನ್ನು ನಾಶ ಮಾಡುತ್ತಿದ್ದು, ಪಂಜಾಬ್ ನ್ನು ವಿಮೋಚನೆಗೊಳಿಸಲು ಶ್ರಮಪಡಿಸಲಾಗುತ್ತಿದೆ. ಇದನ್ನು ನನ್ನ ವೈಯಕ್ತಿಕ ಹೋರಾಟವಲ್ಲ, ನಮ್ಮೆಲ್ಲರ ಹೆಮ್ಮೆಯ ಪ್ರತೀಕವಾಗಿರುವ ಪಂಜಾಬ್ ರಾಜ್ಯದ ಅಸ್ತಿತ್ವದಕ್ಕಾಗಿ ಆಗಿದೆ. ಪಂಜಾಬ್ ರಾಜ್ಯದ ವಿಮೋಚನೆಗಾಗಿ ಆಗಿದೆ. ಭಾರತದ ಆಹಾರ ದಿವಾಳಿಕೋರರ ಬಳಿ ಹೇಗೆ ಹೋಯಿತೆಂಬುದನ್ನು ಪ್ರತೀಯೊಬ್ಬರು ಆಲೋಚಿಸಬೇಕಿದೆ.
ಜನರಿಗಾಗಿ ಆಗಿದ್ದ ಸರ್ಕಾರ, ಇದೀಗ ಕುಟುಂಬಕ್ಕಾಗಿ ಆಗಿ ಹೋಗಿದೆ. ಶೀಘ್ರದಲ್ಲಿಯೇ ಬಾದಲ್ ಅವರ ರಹಸ್ಯಗಳನ್ನು ಬಹಿರಂಗಪಡಿಸುತ್ತೇನೆ. ನಾನೊಬ್ಬ ಯೋಧನಾಗಿದ್ದು, ಪಂಜಾಬ್ ಗಾಗಿ ಹೋರಾಟ ಮಾಡಲು ಸಿದ್ಧನಿದ್ದೇನೆ. ಅಕಾಲಿ ದಳ ಉತ್ತಮ ಗುಂಪಾಗಿದ್ದು, ಇದೀಗ ಕುಟುಂಬದ ಸರ್ಕಾರವಾಗಿ ಹೋಗಿದೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


