ದೇಶ

ನಾನು ಸಿಎಂ ಆಗಿದ್ದಾಗ ಓದದೆಯೇ ಹಲವು ದಾಖಲೆಗಳಿಗೆ ಸಹಿ ಹಾಕಿದ್ದೆ: ಒಮನ್ ಚಾಂಡಿ

ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಹಲವು ಬಾರಿ ಓದದೆಯೇ ಹಲವು ದಾಖಲೆಗಳಿಗೆ ಸಹಿ ಹಾಕಿದ್ದೇನೆ ಎಂದು ಕೇರಳ ಮಾಜಿ ಸಿಎಂ ಒಮನ್ ಚಾಂಡಿ..ತ

ನಾನು ಸಿಎಂ ಆಗಿದ್ದಾಗ ಓದದೆಯೇ ಹಲವು ದಾಖಲೆಗಳಿಗೆ ಸಹಿ ಹಾಕಿದ್ದೆ: ಒಮನ್ ಚಾಂಡಿ
ಒಮನ್ ಚಾಂಡಿ
Published On :
ಕೊಚ್ಚಿ: ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಹಲವು ಬಾರಿ ಓದದೆಯೇ ಹಲವು ದಾಖಲೆಗಳಿಗೆ ಸಹಿ ಹಾಕಿದ್ದೇನೆ ಎಂದು ಕೇರಳ ಮಾಜಿ ಸಿಎಂ ಒಮನ್ ಚಾಂಡಿ ಹೇಳಿದ್ದಾರೆ.
ಸಿಎಂ ಆಗಿದ್ದ ವೇಳೆ ಕೆಲಸದ ಒತ್ತಡ, ಸಮಯದ ಅಭಾವದಿಂದಾಗಿ ಹಲವು ಬಾರಿ ಕೆಲವೊಂದು ಡಾಕ್ಯುಮೆಂಟ್ಸ್ ಗಳನ್ನು ಪರಿಶೀಲಿಸದೇ ಸಹಿ ಮಾಡಿದ್ದೇನೆ, ನಾನು ಪ್ರತಿದಿನ 500-1000 ಜನರನ್ನು ಭೇಟಿ ಮಾಡಿ ಕುಂದು ಕೊರತೆಗಳನ್ನು ಆಲಿಸುತ್ತಿದ್ದೆ.1 ನಿಮಿಷದಲ್ಲಿ ಸುಮಾರು 60 ಪೇಪರ್ ಗಳಿಗೆ ಸಹಿ ಮಾಡುತ್ತಿದ್ದೆ ಹೀಗಾಗಿ ಕೆಲವು ದಾಖಲೆಗಳನ್ನು ನೋಡದೆಯೇ ಸಹಿ ಹಾಕಿದ್ದೇನೆ ಎಂದು ಹೇಳಿದ್ದಾರೆ,
ಸೋಲಾರ್ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ನ್ಯಾಯಾಂಗ ಆಯೋಗದ ಮುಂದೆ ವಕೀಲರು ಕೇಳಿದ ಪ್ರಶ್ನೆಗಳಿಗೆ ಚಾಂಡಿ ಈ ರೀತಿ ಉತ್ತರಿಸಿದ್ದಾರೆ. ನಾನು ಜನರನ್ನು ನಂಬುತ್ತಿದ್ದೆ, ಹೀಗಾಗಿ ಅವರು ಕೇಳುತ್ತಿದ್ದ ಎಲ್ಲಾ ಕೆಲಸಗಳಿಗೂ ನಂಬಿಕೆಯಿಂದ ಸಹಿ ಮಾಡಿದೆ. ಆದರೇ ಅದರಿಂದಲೇ ನಾನು ವಂಚನೆಗೊಳಗಾದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.