ದೇಶ

ದೆಹಲಿಯಲ್ಲಿ ಇಬ್ಬರು ಭಯೋತ್ಪಾದಕರ ಬಂಧನ

ದೆಹಲಿಯ ಭಯೋತ್ಪಾದನ ನಿಗ್ರಹ ದಳ ಪೊಲೀಸರು ಇಂದು ಬೆಳಗ್ಗೆ ಕೆಸಿಪಿ ಸಂಘಟನೆಯ ಕಮಾಂಡರ್ ಮುಖ್ಯಸ್ಥ ಸೇರಿ ಇಬ್ಬರನ್ನು ಬಂಧಿಸಿದ್ದಾರೆ...

ದೆಹಲಿಯಲ್ಲಿ ಇಬ್ಬರು ಭಯೋತ್ಪಾದಕರ ಬಂಧನ
ಬಂಧನ
Published On :

ನವದೆಹಲಿ: ದೆಹಲಿಯ ಭಯೋತ್ಪಾದನ ನಿಗ್ರಹ ದಳ ಪೊಲೀಸರು ಇಂದು ಬೆಳಗ್ಗೆ ಕೆಸಿಪಿ ಸಂಘಟನೆಯ ಕಮಾಂಡರ್ ಮುಖ್ಯಸ್ಥ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ಪೂರ್ವ ದೆಹಲಿಯ ಮಯೂರ್ ವಿಹಾರದಲ್ಲಿ ನೆಲೆಸಿದ್ದ ಕಮಾಂಡರ್ ರಂಜಿತ್ ಅಲಿಯಾಸ್ ರಿಕಿ ಎಂಬಾತನನ್ನು ಬಂಧಿಸಿದ್ದಾರೆ. ಇದೇ ವೇಳೆ ರಂಜಿತ್ ಜತೆ ನೆಲೆಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಣಿಪುರದಲ್ಲಿ ನಡೆದ ಹಲವು ಉಗ್ರ ದಾಳಿಗಳ ರೂವಾರಿಯಾಗಿದ್ದ ರಂಜಿತ್ . ಯಾರನ್ನೊ ಭೇಟಿ ಮಾಡಲು ಮಹಿಳೆಯೊಂದಿಗೆ ಸೇರಿ ದೆಹಲಿಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಂಜಿತ್ ನನ್ನು ಇಂದು ಮಧ್ಯಾಹ್ನ ಕೋರ್ಟ್ ಗೆ ಹಾಜರುಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ. ಕೆಸಿಪಿ ಉಗ್ರ ಸಂಘಟನೆ 2012ರ ಬಳಿಕ ಕಾರ್ಯಾರಂಭಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.