ದೇಶ

ಆಧಾರ್ ಬಳಕೆಯಿಂದ ವೈಯಕ್ತಿಕ ಮಾಹಿತಿ ಸೋರಿಕೆ ಆತಂಕ ಕುರಿತ ಅರ್ಜಿ ತುರ್ತು ವಿಚಾರಣೆ ಸುಪ್ರೀಂ ನಿರಾಕರಣೆ

ಜನರು ಬಳಸುವ ಆಧಾರ್ ಕಾರ್ಡಿನ ಗೌಪ್ಯತೆಯ ಕಾಳಜಿ ಕುರಿತ ತುರ್ತು ವಿಚಾರಣೆ ನಡೆಸಬೇಕೆಂದು...

ಆಧಾರ್ ಬಳಕೆಯಿಂದ ವೈಯಕ್ತಿಕ ಮಾಹಿತಿ ಸೋರಿಕೆ ಆತಂಕ ಕುರಿತ ಅರ್ಜಿ ತುರ್ತು ವಿಚಾರಣೆ ಸುಪ್ರೀಂ ನಿರಾಕರಣೆ
ಸುಪ್ರೀಂ ಕೋರ್ಟ್
Published On :
ನವದೆಹಲಿ: ಜನರು ಬಳಸುವ ಆಧಾರ್ ಕಾರ್ಡಿನ ಗೌಪ್ಯತೆಯ ವಿಚಾರ ಕುರಿತ ತುರ್ತು ವಿಚಾರಣೆ ನಡೆಸಬೇಕೆಂದು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಕೋರ್ಟ್ ಈ ಮುನ್ನ ವಿಷಯವನ್ನು ಸಂವಿಧಾನ ಪೀಠಕ್ಕೆ ಉಲ್ಲೇಖಿಸಿತ್ತು.
ದೇಶದ ನಾಗರಿಕರ ಖಾಸಗಿ ಹಕ್ಕುಗಳೇನು?, ಇಲ್ಲಿ ಶ್ರೀಮಂತರು ಮತ್ತು ಬಡವರಿಗೆ ಸಮಾನವಾದ ನ್ಯಾಯ ಮತ್ತು ಸಮಾನ ರಕ್ಷಣೆ ಸಿಗುತ್ತಿದೆಯೇ ಎಂಬ ಪ್ರಜಾಪ್ರಭುತ್ವ ಸರ್ಕಾರದಲ್ಲಿರುವ ಮೂಲಭೂತ ಪ್ರಶ್ನೆಗಳ ಕುರಿತು ಸರ್ಕಾರ ಗಮನಹರಿಸಬೇಕೆಂದು ಕಳೆದ ವರ್ಷ ಅಕ್ಟೋಬರ್ ನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು.
ಅಕ್ಟೋಬರ್ ನಲ್ಲಿ ನ್ಯಾಯಾಲಯ ಆಧಾರ್ ಕಾರ್ಡುಗಳನ್ನು ನರೇಗಾ ಯೋಜನೆಗಳು, ಜನಧನ ಯೋಜನೆ, ಪಿಂಚಣಿ ಮತ್ತು ಭವಿಷ್ಯ ನಿಧಿ ಯೋಜನೆಗಳಿಗೆ ಬಳಸಲು ಅವಕಾಶ ನೀಡಿತ್ತು.
ಕೋರ್ಟ್ ಇದಕ್ಕೂ ಮುನ್ನ ಆಧಾರ್ ಕಾರ್ಡುಗಳ ಬಳಕೆಯನ್ನು ಪಡಿತರ ಚೀಟಿ ಮತ್ತು ಎಲ್ ಪಿಜಿ ಸಬ್ಸಿಡಿಗಳಿಗೆ ಸಂಪರ್ಕ ಕಲ್ಪಿಸಲು ಮಾತ್ರ ನಿರ್ಬಂಧ ಹೇರಿತ್ತು. ಅದಕ್ಕೆ ಕೇಂದ್ರ ಸರ್ಕಾರ ಕೋರ್ಟ್ ಮೊರೆ ಹೋಗಿ ಇನ್ನಷ್ಟು ಸೇವೆಗಳಿಗೆ ಬಳಸಲು ಅನುವು ಮಾಡಿಕೊಡಬೇಕೆಂದು ಕೇಳಿಕೊಂಡಿತ್ತು.
ಅದಕ್ಕೆ ನಂತರ ಸ್ಪಷ್ಟನೆ ನೀಡಿದ ಸುಪ್ರೀಂ ಕೋರ್ಟ್, ಜನರು ಸ್ವ ಇಚ್ಛೆಯಿಂದ ಆಧಾರ್ ಸಂಖ್ಯೆಯನ್ನು ವಿವಿಧ ಯೋಜನೆಗಳ ಜೊತೆ ಸಂಪರ್ಕ ಮಾಡಿಕೊಳ್ಳಬಹುದು. ಆಧಾರ್ ಸಂಖ್ಯೆ ಸಂಪರ್ಕಿಸಿಲ್ಲ ಎಂದು ಯೋಜನೆಗಳ ಲಾಭಗಳನ್ನು ನಿರಾಕರಿಸಬಾರದು ಎಂದು ಆದೇಶ ನೀಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.