ದೇಶ

ಉತ್ತರ ಪ್ರದೇಶ 5 ನೇ ಹಂತದ ಚುನಾವಣೆ: ಬೆಳಿಗ್ಗೆ 10 ರವರೆಗೆ ಶೇ.12-13 ರಷ್ಟು ಮತದಾನ

ಉತ್ತರ ಪ್ರದೇಶದಲ್ಲಿ 5 ನೇ ಹಂತದ ಚುನಾವಣೆಗೆ 51 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಾರಂಭವಾಗಿದ್ದು, ಬೆಳಿಗ್ಗೆ 10 ಗಂಟೆ ವರೆಗೆ ಶೇ.12-13 ರಷ್ಟು ಮತದಾನ ನಡೆದಿದೆ.

ಉತ್ತರ ಪ್ರದೇಶ 5 ನೇ ಹಂತದ ಚುನಾವಣೆ: ಬೆಳಿಗ್ಗೆ 10 ರವರೆಗೆ ಶೇ.12-13 ರಷ್ಟು ಮತದಾನ
Published On :
ಲಖನೌ: ಉತ್ತರ ಪ್ರದೇಶದಲ್ಲಿ 5 ನೇ ಹಂತದ ಚುನಾವಣೆಗೆ 51 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಾರಂಭವಾಗಿದ್ದು, ಬೆಳಿಗ್ಗೆ 10 ಗಂಟೆ ವರೆಗೆ ಶೇ.12-13 ರಷ್ಟು ಮತದಾನ ನಡೆದಿದೆ. 
11 ಜಿಲ್ಲೆಗಳ 51 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಎಸ್ ಪಿ-ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದ್ದು,  105 ಕ್ಷೇತ್ರಗಳಲ್ಲಿ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್-ಎಸ್ ಪಿ ಅಮೇಥಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್- ಎಸ್ ಪಿ ಅಭ್ಯರ್ಥಿಗಳು ಸ್ಪರ್ಧಿಸಿರುವುದು ವಿಶೇಷವಾಗಿದೆ. 
ಬೆಳಿಗ್ಗೆ 10 ಗಂಟೆ ವರೆಗೆ ಶೇ.12-13 ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಮೇಥಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ನ ಅಭ್ಯರ್ಥಿಯಾಗಿ ಅಮಿತಾ ಸಿಂಗ್ ಸ್ಪರ್ಧಿಸಿದ್ದು, ಬೆಳಿಗ್ಗೆ  7 ಕ್ಕೆ ಮತದಾನ ಪ್ರಾರಂಭವಾದ ಬೆನ್ನಲ್ಲೇ ಅಮಿತಾ ಸಿಂಗ್ ಮತ ಚಲಾವಣೆ ಮಾಡಿದ್ದಾರೆ. ಅಮಿತಾ ಸಿಂಗ್ ವಿರುದ್ಧ ಸಮಾಜವಾದಿ ಪಕ್ಷದಿಂದ ಗಾಯತ್ರಿ ಪ್ರಜಾಪತಿ ಸ್ಪರ್ಧಿಸಿದ್ದು, ಅವರೂ ಸಹ ಮತದಾನ ಮಾಡಿದ್ದಾರೆ. ಫೈಜಾಬಾದ್, ಬಹರೈಚ್, ಬಸ್ತಿ, ಗೊಂದಾ, ಸಿದ್ಧಾರ್ಥನಗರ್, ಸಂತ್ ಕಬೀರ್ ನಗರ್, ಸುಲ್ತಾನ್ ಪುರ, ಶ್ರವಸ್ತಿ ಕ್ಷೇತ್ರಗಳಲ್ಲಿ ಜನರು ಮತದಾನ ಮಾಡಲು ಸಾಲುಗಟ್ಟಿ ನಿಂತಿದ್ದಾರೆ. ಒಟ್ಟು 1.84 ಕೋಟಿ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.