ಗುಜರಾತ್'ನಲ್ಲಿ ಬಾಂಬ್ ಸ್ಫೋಟಕ್ಕೆ ಭಾರೀ ಸಂಚು: 2 ಇಸಿಸ್ ಉಗ್ರರನ್ನು ಬಂಧಿಸಿದ ಅಧಿಕಾರಿಗಳು
ಗುಜರಾತ್'ನಲ್ಲಿ ದೊಡ್ಡ ಮಟ್ಟದಲ್ಲಿ ವಿಧ್ವಂಕ ಕೃತ್ಯವೆಸಗಲು ಭಾರೀ ಸಂಚು ರೂಪಿಸಿದ್ದ ಇಸಿಸ್ ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಗುಜರಾತ್ ಉಗ್ರ ನಿಗ್ರಹ ತಂಡದ ಅಧಿಕಾರಿಗಳು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ...

Published On :
ರಾಜ್ಕೋಟ್: ಗುಜರಾತ್'ನಲ್ಲಿ ದೊಡ್ಡ ಮಟ್ಟದಲ್ಲಿ ವಿಧ್ವಂಕ ಕೃತ್ಯವೆಸಗಲು ಭಾರೀ ಸಂಚು ರೂಪಿಸಿದ್ದ ಇಸಿಸ್ ಉಗ್ರ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಗುಜರಾತ್ ಉಗ್ರ ನಿಗ್ರಹ ತಂಡದ ಅಧಿಕಾರಿಗಳು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಉಗ್ರರಿಬ್ಬರೂ ಸಹೋದರರಾಗಿದ್ದು, ಗುಜರಾತ್ ನ ಛೋಟಿಲಾ ಮಂದಿರ್ ನಲ್ಲಿ ಬಾಂಬ್ ಸ್ಫೋಟಕ್ಕೆ ಭಾರೀ ಸಂಚು ರೂಪಿಸಿದ್ದರೆಂದು ತಿಳಿದುಬಂದಿದೆ.
ನಾಸಿಮ್ ಮತ್ತು ನಿತಿನ ಬಂಧಿತ ಉಗ್ರರಾಗಿದ್ದು, ರಾಜ್ಕೋಟ್ ಹಾಗೂ ಭವನಗರದಲ್ಲಿ ಗುಜರಾತ್ ಉಗ್ರ ನಿಗ್ರಹ ತಂಡದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರನ್ನೂ ಬಂಧನಕ್ಕೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
2 ವರ್ಷಗಳ ಹಿಂದೆ ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಉಗ್ರರ ಕಪಿಮುಷ್ಠಿಯಲ್ಲಿ ಬಂಧಿಯಾಗಿದ್ದ ಡಾ.ರಾಮಮೂರ್ತಿ ಅವರು ಇತ್ತೀಚೆಗಷ್ಟೇ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದರು. ಉಗ್ರ ಸಂಘಟನೆಯ ಸಂಚನ್ನು ಮತ್ತು ಅಲ್ಲಿ ತಾವು ಅನುಭವಿಸಿದ ನೋವನ್ನು ಎಳೆ ಎಳೆಯಾಗಿ ಬಿಟ್ಟಿಟ್ಟಿದ್ದರು. ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಭಾರತದ ಕುರಿತಂತೆ ಸಾಕಷ್ಟು ಮಾಹಿತಿ ತಿಳಿದಿದೆ.
ಇಲ್ಲಿನ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಸ್ಛತಿಗತಿಗಳನ್ನು ಅವರು ಚೆನ್ನಾಗಿ ತಿಳಿದಿದ್ದಾರೆ. ಅಲ್ಲಿರುವವರೆಲ್ಲರೂ ಬಹುತೇಕ ವಿದ್ಯಾವಂತರು. ಹೀಗಾಗಿ ಅವರಿಗೆ ಇಲ್ಲಿನ ಅಭಿವೃದ್ದಿ, ಶಿಕ್ಷಣ ಮತ್ತ ಆರ್ಥಿಕತೆಯನ್ನು ಚೆನ್ನಾಗಿ ತಿಳಿದಿದ್ದಾರೆ. ಅಂತೆಯೇ ಭಾರತದ ಮೇಲೆ ತಮ್ಮ ಸಿದ್ಧಾಂತಗಳನ್ನು ಹೇರಲು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಅಲ್ಲದೆ ಇಲ್ಲಿಯೂ ಸಾಕಷ್ಟು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Arrestಉಗ್ರರುGujaratಗುಜರಾತ್ISISGujarat Anti terror SquadterroristಬಂಧನRajkotರಾಜ್ಕೋಟ್Bhavnagar. ಇಸಿಸ್ಗುಜರಾತ್ ಉಗ್ರ ನಿಗ್ರಹ ತಂಡಭವನಗರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


