ದೇಶ

ಇಂಡೋ-ಪಾಕ್ ಗಡಿಯಲ್ಲಿ ಶಂಕಾಸ್ಪದ ಚಟುವಟಿಕೆ, ಬಿಎಸ್ ಎಫ್ ಯೋಧರ ಗುಂಡಿಗೆ ಶಂಕಿತ ಉಗ್ರನ ಸಾವು!

ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೆ ಉಗ್ರ ಚಟುವಟಿಕೆಗಳ ಶಂಕೆ ವ್ಯಕ್ತವಾಗುತ್ತಿದ್ದು, ಅಕ್ರಮವಾಗಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಓರ್ವ ಶಂಕಿತ ಉಗ್ರನನ್ನು ಯೋಧರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಇಂಡೋ-ಪಾಕ್ ಗಡಿಯಲ್ಲಿ ಶಂಕಾಸ್ಪದ ಚಟುವಟಿಕೆ, ಬಿಎಸ್ ಎಫ್ ಯೋಧರ ಗುಂಡಿಗೆ ಶಂಕಿತ ಉಗ್ರನ ಸಾವು!
ಸಂಗ್ರಹ ಚಿತ್ರ
Published On :

ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೆ ಉಗ್ರ ಚಟುವಟಿಕೆಗಳ ಶಂಕೆ ವ್ಯಕ್ತವಾಗುತ್ತಿದ್ದು, ಅಕ್ರಮವಾಗಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಓರ್ವ ಶಂಕಿತ ಉಗ್ರನನ್ನು ಯೋಧರು ಗುಂಡಿಕ್ಕಿ ಹತ್ಯೆ  ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪರಗ್ವಾಲ್ ಬಳಿಯ ಕಥುವಾ ಸೆಕ್ಟರ್ ನಲ್ಲಿ ಪಹರೆ ಕಾಯುತ್ತಿದ್ದ ಯೋಧರು ಗಡಿಯಲ್ಲಿನ ಕಬ್ಬಿಣದ ಮುಳ್ಳಿನ ಬೇಲಿಯನ್ನು ಶಂಕಿತ ಉಗ್ರರು ದಾಟುತ್ತಿರುವ ದೃಶ್ಯ ನೋಡಿ ಕೂಡಲೇ ಹಿರಿಯ ಅಧಿಕಾರಿಗಳನ್ನು  ಎಚ್ಚರಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಯೋಧರು ಈ ವೇಳೆ ಓರ್ವ ಅಕ್ರಮ ನುಸುಳು ಕೋರ ಅಥವಾ ಶಂಕಿತ ಉಗ್ರಗಾಮಿಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. ಗಡಿ ದಾಟುತ್ತಿದ್ದ ಮತ್ತೋರ್ವನನ್ನು ಯೋಧರು ವಶಕ್ಕೆ  ಪಡೆದಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಬುದ್ದಿಮಾಂಧ್ಯನಂತೆ ಕಾಣುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಯೋಧರ ವಶದಲ್ಲಿ ಬುದ್ದಿಮಾಂಧ್ಯ ವ್ಯಕ್ತಿಯನ್ನು 30 ವರ್ಷ ವಯಸ್ಸಿನ ಅಜರ್ ಎಂದು ಗುರುತಿಸಲಾಗಿದ್ದು,  ಆತನ ಪೂರ್ವಪರ ವಿಚಾರಣೆಗಾಗಿ ಅಧಿಕಾರಿಗಳು  ತನಿಖೆ ಕೈಗೊಂಡಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.