ಜಗಳದಲ್ಲಿ ಗರ್ಭಿಣಿಗೆ ಒದ್ದು ಮಗು ಸಾವು: ಬಿಜೆಪಿ ಮುಖಂಡ ಸೇರಿ ಐವರ ಬಂಧನ
ಏರು ಶಬ್ದದಲ್ಲಿ ಧ್ವನಿವರ್ಧಕ ಹಾಕಿದ ಸಂಬಂಧ ನಡೆಯುತ್ತಿದ್ದ ಜಗಳದ ವೇಳೆ ಗರ್ಭಿಣಿ ಹೊಟ್ಟೆಗೆ ಕಾಲಿನಿಂದ ಒದ್ದ ಪರಿಣಾಮ ಮಗು ಸಾವನ್ನಪ್ಪಿರುವ ಘಟನೆ ಪಶ್ಚಿಮ ...

ಕೃಷ್ಣನಗರ: ಏರು ಶಬ್ದದಲ್ಲಿ ಧ್ವನಿವರ್ಧಕ ಹಾಕಿದ ಸಂಬಂಧ ನಡೆಯುತ್ತಿದ್ದ ಜಗಳದ ವೇಳೆ ಗರ್ಭಿಣಿ ಹೊಟ್ಟೆಗೆ ಕಾಲಿನಿಂದ ಒದ್ದ ಪರಿಣಾಮ ಮಗು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಕೃಷ್ಣನಗರ್ ಎಂಬಲ್ಲಿ ನಡೆದಿದೆ.
ನಾಡಿಯಾ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಕೀರ್ತನ್ ಸಮಾರಂಭ ನಡೆಯುತ್ತಿತ್ತು, ಈ ವೇಳೆ ಧ್ವನಿ ವರ್ಧಕವನ್ನು ಜೋರಾಗಿ ಹಾಕಲಾಗಿತ್ತು, ಇದನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿತ್ತು. ಶಂಭು ಚಂದ್ರ ದಾಸ್ ಎಂಬಾತನ ವಿರುದ್ಧ ಪ್ರತಿಭಟನೆ ನಡೆಸಿ ಆತನ ಮೇಲೆ ಹಲ್ಲೆ ಮಾಡಲಾಗಿತ್ತು.
ಈ ವೇಳೆ ಆತನ ಮೇಲೆ ನಡೆಯುತ್ತಿದ್ದ ಹಲ್ಲೆ ತಪ್ಪಿಸಲು ಆತನ ಅತ್ತಿಗೆ ಮಾಯಾರಾಣಿ ಸಂತ್ರಾ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ನಡೆದ ಜಗಳದಲ್ಲಿ ಆಕೆಯ ಹೊಟ್ಟೆಗೆ ಒದೆಯಲಾಗಿದೆ. ಇದರಿಂದ ಆಕೆ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಸ್ಥಳೀಯ ಬಿಜೆಪಿ ಮುಖಂಡ ಸೇರಿದಂತೆ ಐವರನ್ನು ಬಂಧಿಸಲಾಗಿದೆ.
ಮೊದಲಿಗೆ ಆಕೆಯನ್ನು ದುಬಾಲಿಯಾ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಕೃಷ್ಣನಗರ್ ಸರ್ದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ, ಹೊಟ್ಟೆಯಲ್ಲಿದ್ದ ಮಗು ಈ ವೇಳೆ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಸ್ ಐವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಸಂಬಂಧ ಐವರನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


