ದೇಶ

ಪಳನಿಸ್ವಾಮಿಗೆ ರಿಲೀಫ್; ಕಲಾಪದ ಸಂಪೂರ್ಣ ವಿಡಿಯೋ ಸಲ್ಲಿಸುವಂತೆ ಡಿಎಂಕೆಗೆ ಮದ್ರಾಸ್ "ಹೈ" ಸೂಚನೆ

ವಿಶ್ವಾಸಮತಯಾಚನೆ ವೇಳೆ ತಮಿಳುನಾಡು ವಿಧಾನಸಭೆ ಕಲಾಪದ ಸಂಪೂರ್ಣ ಸಾಕ್ಷ್ಯಾಧಾರಗಳನ್ನು ಸಲ್ಲಿಕೆ ಮಾಡುವಂತೆ ಡಿಎಂಕೆಗೆ ಮದ್ರಾಸ್ ಹೈಕೋರ್ಟ್ ಬುಧವಾರ ಸೂಚನೆ ನೀಡಿದೆ...

ಪಳನಿಸ್ವಾಮಿಗೆ ರಿಲೀಫ್; ಕಲಾಪದ ಸಂಪೂರ್ಣ ವಿಡಿಯೋ ಸಲ್ಲಿಸುವಂತೆ ಡಿಎಂಕೆಗೆ ಮದ್ರಾಸ್ "ಹೈ" ಸೂಚನೆ
ಮದ್ರಾಸ್ ಹೈಕೋರ್ಟ್
Published On :

ಚೆನ್ನೈ: ವಿಶ್ವಾಸಮತಯಾಚನೆ ವೇಳೆ ತಮಿಳುನಾಡು ವಿಧಾನಸಭೆ ಕಲಾಪದ ಸಂಪೂರ್ಣ ಸಾಕ್ಷ್ಯಾಧಾರಗಳನ್ನು ಸಲ್ಲಿಕೆ ಮಾಡುವಂತೆ ಡಿಎಂಕೆಗೆ ಮದ್ರಾಸ್ ಹೈಕೋರ್ಟ್ ಬುಧವಾರ ಸೂಚನೆ ನೀಡಿದೆ.

ತಮಿಳುನಾಡು ಮುಖ್ಯಮಂತ್ರಿ ಸ್ಥಾನ ಸಂಬಂಧ ತಮಿಳುನಾಡು ವಿಧಾನಸಭಾ ವಿಶೇಷ ಅಧಿವೇಶನದ ವೇಳೆ ಕಾನೂನು ಬಾಹಿರವಾಗಿ ವಿಶ್ವಾಸಮತಯಾಚನೆ ಮಾಡಲಾಗಿದೆ ಎಂದು ಆರೋಪಿಸಿ ಈ ಹಿಂದೆ ಡಿಎಂಕೆ ಪಕ್ಷದ ನಾಯಕರು ಮದ್ರಾಸ್ ಹೈಕೊರ್ಟ್ ಮೆಟ್ಟಿಲೇರಿದ್ದರು.

ಅರ್ಜಿ ಸಂಬಂಧ ಇಂದು ಮದ್ರಾಸ್ ಹೈಕೋರ್ಟ್ ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ವಕೀಲ ಕೆ. ಬಾಲು ಅವರು ಡಿಎಂಕೆ ಪರವಾಗಿ ವಾದ ಮಂಡನೆ ಮಾಡಿದ್ದರು. ಬೆದರಿಕೆ ಹಾಕಿ ಎಐಎಡಿಎಂಕೆ ಪಕ್ಷದ ಶಾಕರನ್ನು 11 ದಿನಗಳ ಕಾಲ ಕೂಡಿ ಹಾಕಲಾಗಿತ್ತು. ಈ ಸಂಬಂಧ ಸಾಕಷ್ಟು ಶಾಸಕರು ದೂರನ್ನು ದಾಖಲು ಮಾಡಿದ್ದಾರೆ. ಶಾಸಕರನ್ನು ಕೂಡಿ ಹಾಕಿರುವುದಕ್ಕೆ ಹಾಗೂ ಶಾಸಕರು ದೂರು ದಾಖಲಿಸಿರುವುದಕ್ಕೆ ನಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದು ಹೇಳಿದರು.

ಈ ವೇಳೆ ಪ್ರತಿಕ್ರಿಯೆ ನೀಡಿದ ನ್ಯಾಯಾಲಯ ಕಲಾಪದ ಸಂಪೂರ್ಣ ಅಸಲಿ ವಿಡಿಯೋ ಹಾಗೂ ಇನ್ನಿತರೆ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುವಂತೆ ಡಿಎಂಕೆಗೆ ಸೂಚನೆ ನೀಡಿದ್ದು, ವಿಚಾರಣೆಯನ್ನು ಫೆ.27ಕ್ಕೆ ಮುಂದೂಡಿದೆ. ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ವಿಶ್ವಾಸಮತಯಾಚನೆಯಲ್ಲಿ ಯಶಸ್ಸಾಗಿದ್ದರೂ, ವಿರೋಧ ಪಕ್ಷಗಳ ಆರೋಪ ಹಾಗೂ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಇ.ಕೆ. ಪಳನಿ ಸ್ವಾಮಿಯವರಿಗೆ ತಾತ್ಕಾಲಿಕ ರಿಲೀಫ್ ದೊರೆತಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.