ದೇಶ

ಅಖಿಲೇಶ್ ನನ್ನು ಮಲಮಗನ ರೀತಿ ನೋಡಿಲ್ಲ: ಮುಲಾಯಂ ಎರಡನೇ ಪತ್ನಿ ಸಾಧ್ನಾ

ಸಮಾಜವಾದಿ ಪಕ್ಷದ ಕೌಟುಂಬಿಕ ಕಲಹ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ, ಇದೇ ವೇಳೆ ಕುಟುಂಬದ ಒಳಜಗಳದ ಬಗ್ಗೆ ಮುಲಾಯಂ ಸಿಂಗ್ ಯಾದವೇ 2ನೇ ಪತ್ನಿ ಸಾಧ್ನಾ ..

ಅಖಿಲೇಶ್ ನನ್ನು ಮಲಮಗನ ರೀತಿ ನೋಡಿಲ್ಲ: ಮುಲಾಯಂ ಎರಡನೇ ಪತ್ನಿ ಸಾಧ್ನಾ
ಪತ್ನಿ ಸಾಧನಾ ಜೊತೆ ಮುಲಯಂ ಸಿಂಗ್ ಯಾದವ್
Published On :

ಇಟವಾ: ಸಮಾಜವಾದಿ ಪಕ್ಷದ ಕೌಟುಂಬಿಕ ಕಲಹ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ, ಇದೇ ವೇಳೆ ಕುಟುಂಬದ ಒಳಜಗಳದ ಬಗ್ಗೆ ಮುಲಾಯಂ ಸಿಂಗ್ ಯಾದವೇ 2ನೇ ಪತ್ನಿ ಸಾಧ್ನಾ ಪ್ರತಿಕ್ರಿಯೆ ನೀಡಿದ್ದಾರೆ.

ಉತ್ತರ ಪ್ರದೇಶದ ಮೊದಲ ಕುಟುಂಬದಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯಗಳಿಲ್ಲ, ನಾನು ಅಖಿಲೇಶ್ ತಾಯಿ, ಆತ ನನ್ನ ಮಗ ಎಂದು ಹೇಳಿದ್ದಾರೆ.

ಜಸ್ವಂತ್ ನಗರ ವಿಧಾನ ಸಭೆ ಕ್ಷೇತ್ರದಲ್ಲಿ ಮತ ಚಲಾಯಿಸಿದ ನಂತರ ಮಾತನಾಡಿದ ಅವರು, ಯಾದವ್ ಕುಟುಂಬದಲ್ಲಿ ಕಲಹ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ, ಮಲತಾಯಿ ಎಂಬ ಶಬ್ದ ಬಳಕೆ ಮಾಡುವುದು ಸರಿಯಲ್ಲ, ಇದರ ಹಿಂದೆ ಯಾರಿದ್ದಾರೆ ಎಂಬುದು ನನಗೆ ತಿಳಿಯದು, ಆದರೆ ಇದನ್ನೆಲ್ಲಾ ಮಾಡುತ್ತಿರುವವರು ಕೆಟ್ಟ ಜನಗಳು ಎಂದು ಹರಿಹಾಯ್ದಿದ್ದಾರೆ.

ಮುಲಾಯಂ ಸೊಸೆ ಅಪರ್ಣಾ ಯಾದವ್ ಕೂಡ ಈ ವೇಳೆ ಜೊತೆಗಿದ್ದರು. ಲಕ್ನೋದ ಕಾಂಟ್ ವಿಧಾನ ಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಅಪರ್ಣಾ ಯಾದವ್ ಪರ ಅಖಿಲೇಶ್ ಪತ್ನಿ ಡಿಂಪಲ್ ಯಾದವ್ ಚುನಾವಣಾ ಪ್ರಚಾರ ನಡೆಸಿದ್ದರು.

ಮುಲಾಯಂ 2ನೇ ಪುತ್ರ ಪ್ರತೀಕ್ ಯಾದವ್ ಪತ್ನಿ ಅಪರ್ಣಾ ಯಾದವ್ ಬಿಜೆಪಿಯ ರೀಟಾ ಬಹುಗುಣ ಜೋಶಿ ವಿರುದ್ಧ ಸ್ಪರ್ದಿಸಿದ್ದಾರೆ.

ಅಖಿಲೇಶ್ ಯಾದವ್ ಮತ್ತು ಪ್ರತೀಕ್ ಯಾದವ್ ಇಬ್ಬರು ನನ್ನ ಎರಡು ಕಣ್ಣುಗಳಿದ್ದಂತೆ, ಒಂದು ಕಣ್ಣಿಗೆ ನೋವಾದರೇ ಯಾವ ರೀತಿಯ ಅನುಭವವಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.