ಸಾರ್ವಜನಿಕರಿಗೆ ಬ್ಯೂಟಿ ಸಲೂನ್ ತೆರೆಯಲಿರುವ ಕೇರಳದ ಕಾರಾಗೃಹ
ಕೇರಳದ ಪೂಜಪ್ಪುರ ಕೇಂದ್ರ ಕಾರಾಗೃಹ ಶೀಘ್ರವೇ ಬ್ಯೂಟಿ ಸಲೂನ್ ನ್ನು ಪ್ರಾರಂಭಿಸಲಿದ್ದು, ಅಲ್ಲಿನ ಕೈದಿಗಳು ಬ್ಯೂಟಿಷಿಯನ್ ಗಳಾಗಲಿದ್ದಾರೆ.

Published On :
ತಿರುವನಂತಪುರಂ: ಕೇರಳದ ಪೂಜಪ್ಪುರ ಕೇಂದ್ರ ಕಾರಾಗೃಹ ಶೀಘ್ರವೇ ಬ್ಯೂಟಿ ಸಲೂನ್ ನ್ನು ಪ್ರಾರಂಭಿಸಲಿದ್ದು, ಅಲ್ಲಿನ ಕೈದಿಗಳು ಬ್ಯೂಟಿಷಿಯನ್ ಗಳಾಗಲಿದ್ದಾರೆ.
ಕೈದಿಗಳಿಗೆ ಪುನರ್ವಸತಿ ಕಾರ್ಯಕ್ರಮಗಳನ್ನು ಕಲ್ಪಿಸಲು ಬಂಧಿಕಾನೆ ಇಲಾಖೆ ಬ್ಯೂಟಿ ಸಲೂನ್ ಪ್ರಾರಂಭಿಸಲು ನಿರ್ಧರಿಸಿದ್ದು, ಬಂಧಿಕಾನೆ ಇಲಾಖೆ ಪ್ರಾರಂಭಿಸಿರುವ ಆಹಾರ ಉದ್ಯಮ, ಉಡುಪು ತಯಾರಿಕೆ ಸೇರಿದಂತೆ ಹಲವು ಕಾರ್ಯಕ್ರಮಗಳ ಪಟ್ಟಿಗೆ ಬ್ಯೂಟಿ ಸಲೂನ್ ಸಹ ಸೇರ್ಪಡೆಯಾಗಲಿದೆ ಎಂದು ಬಂಧಿಕಾನೆ ಎಸ್ ಪಿ ಎಸ್ ಸಂತೋಷ್ ಹೇಳಿದ್ದಾರೆ.
ಅನುಪಯುಕ್ತವಾಗಿರುವ ಕ್ವಾರ್ಟರ್ಸ್ ಬಿಲ್ಡಿಂಗ್ ನ್ನು ಪುರುಷರಿಗಾಗಿಯೇ ಹವಾನಿಯಂತ್ರಿತ ಬ್ಯೂಟಿ ಸಲೂನ್ ಆಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ. ಕೇರಳದಲ್ಲಿ ಬಂಧಿಕಾನೆ ಪ್ರಾರಂಭಿಸುತ್ತಿರುವ ಎರಡನೇ ಬ್ಯೂಟಿ ಸಲೂನ್ ಇದಾಗಿದ್ದು, ಕಣ್ಣೂರಿನ ಕೇಂದ್ರ ಕಾರಾಗೃಹ ಫೀನಿಕ್ಸ್ ಫ್ರೀಡಂ ಎಕ್ಸ್ ಪ್ರೆಷನ್ಸ್ ಹೆಸರಿನ ಬ್ಯೂಟಿ ಸಲೂನ್ ನ್ನು ಪ್ರಾರಂಭಿಸಿ, ಬಂಧಿಕಾನೆಯ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಏಪ್ರಿಲ್- ಮೇ ತಿಂಗಳಲ್ಲಿ ಪೂಜಪ್ಪುರ ಬ್ಯೂಟಿ ಸಲೂನ್ ಪ್ರಾರಂಭವಾಗಲಿದ್ದು, ಕೈದಿಗಳಿಗೆ ಶೀಘ್ರವೇ ತರಬೇತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


