ದೇಶ

ಅಕ್ರಮವಾಗಿ ಭೂಮಿ ಮಂಜೂರು ಆರೋಪ: ಮಾಯಾವತಿಗೆ ಅಲಹಾಬಾದ್ ಹೈಕೋರ್ಟ್ ನೊಟೀಸ್

ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಹಾಗೂ ಅವರ ಇಬ್ಬರು ನಿಕಟ ಸಂಬಂಧಿಕರಿಗೆ...

ಅಕ್ರಮವಾಗಿ ಭೂಮಿ ಮಂಜೂರು ಆರೋಪ: ಮಾಯಾವತಿಗೆ ಅಲಹಾಬಾದ್ ಹೈಕೋರ್ಟ್ ನೊಟೀಸ್
ಮಾಜಿ ಮುಖ್ಯಮಂತ್ರಿ ಮಾಯಾವತಿ
Published On :
ಅಲಹಾಬಾದ್: ಬಹುಜನ  ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಹಾಗೂ ಅವರ ಇಬ್ಬರು ನಿಕಟ ಸಂಬಂಧಿಕರಿಗೆ ಅಲಹಾಬಾದ್ ಹೈಕೋರ್ಟ್ ಬುಧವಾರ ನೊಟೀಸ್ ಜಾರಿ ಮಾಡಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ತಮ್ಮ ಗ್ರಾಮದಲ್ಲಿ ಮಾಯಾವತಿಯವರು ಭೂ ದಾಖಲೆಗಳನ್ನು ದುರುಪಯೋಗಪಡಿಸಿ ಅಕ್ರಮ ಎಸಗಿದ್ದರು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಆಧಾರದ ಮೇಲೆ ನೊಟೀಸ್ ಜಾರಿ ಮಾಡಲಾಗಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಬಿ.ಭೋಸ್ಲೆ ಮತ್ತು ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠ, ಸಂದೀಪ್ ಭಾಟಿ ಎಂಬ ಸಾಮಾಜಿಕ ಕಾರ್ಯಕರ್ತ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದೂರಿಗೆ ಸಂಬಂಧಪಟ್ಟಂತೆ ನೊಟೀಸ್ ಜಾರಿ ಮಾಡಿದೆ.
ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದ ಬದಲ್ ಪುರ ಗ್ರಾಮದಲ್ಲಿ 47,433 ಚದರಡಿ ವಿಸ್ತೀರ್ಣದ ಕೃಷಿ ಭೂಮಿಯನ್ನು ಮಾಯಾವತಿಯವರು ವಸತಿ ಅಥವಾ ಕೃಷಿಯೇತರ ಭೂಮಿಯೆಂದು ಘೋಷಿಸಿದ್ದರು. ಕೃಷಿ ಭೂಮಿಯನ್ನು ತುಂಡುಗಳಾಗಿ, ಸೈಟ್ ಗಳಾಗಿ ಪರಿವರ್ತಿಸಿ ಮಾರಾಟ ಮಾಡಿ ಭಾರೀ ಹಣ ಗಳಿಸುವ ಮೂಲಕ ಅಕ್ರಮ ಎಸಗಿದ್ದಾರೆ ಎಂದು ದೂರು ನೀಡಿದ್ದರು.
ಗ್ರೇಟರ್ ನೊಯ್ಡಾ ಭಾಗದಲ್ಲಿ ಈ ಭೂಮಿ ಇದ್ದು ಮಾಯಾವತಿ, ಅವರ ಸೋದರ ಪ್ರಭು ದಯಾಳ್ ಮತ್ತು ಸೋದರನ ಪುತ್ರ ಆನಂದ್ ಕುಮಾರ್ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.