ಹಿಂದೆಯೂ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ, ಅಂತಿಮವಾಗಿ ಧರ್ಮಕ್ಕೆ ಜಯ ಸಿಗಲಿದೆ: ಶಶಿಕಲಾ
ಅಧರ್ಮ ಮೇಲುಗೈ ಸಾಧಿಸಬಹುದು ಆದರೆ ಅಂತಿಮವಾಗಿ ಧರ್ಮಕ್ಕೆ ಜಯ ಸಿಗಲಿದೆ ಎಂದು ವಿಕೆ ಶಶಿಕಲಾ ಮಂಗಳವಾರ ಹೇಳಿದ್ದಾರೆ.

ಚೆನ್ನೈ: ಅಸತ್ಯ ಮೇಲುಗೈ ಸಾಧಿಸಬಹುದು ಆದರೆ ಅಂತಿಮವಾಗಿ ಧರ್ಮಕ್ಕೆ ಜಯ ಸಿಗಲಿದೆ ಎಂದು ವಿಕೆ ಶಶಿಕಲಾ ಮಂಗಳವಾರ ಹೇಳಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಚ್ ತೀರ್ಪು ಹೊರ ಬೀಳುತ್ತಿದ್ದಂತೆಯೇ ಇತ್ತ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿಕೆ ಶಶಿಕಲಾ ಅವರು, ನಾನು ಈ ಹಿಂದೆಯೂ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ಅಸತ್ಯ ಮೇಲುಗೈ ಸಾಧಿಸಬಹುದು. ಆದರೆ ಅಂತಿಮವಾಗಿ ಧರ್ಮಕ್ಕೆ ಜಯ ಸಿಗಲಿದೆ. ಅಮ್ಮಾ ಸಂಕಷ್ಟದಲ್ಲಿದ್ದಾಗ ನಾನೂ ಕಷ್ಟ ಅನುಭವಿಸಿದ್ದೇನೆ. ಈ ಬಾರಿ ಕೂಡ ಅದೇ ಮುಂದುವರೆದಿದೆ ಎಂದು ಹೇಳಿದ್ದಾರೆ.
ಜಯಲಲಿತಾ ಮೇಲಿನ ಹೊರೆಯನ್ನು ಶಶಿಕಲಾ ಹೊತ್ತಿದ್ದರು, ಈಗಲೂ ಅದು ಮುಂದವರೆದಿದೆ: ಎಐಎಡಿಎಂಕೆ ಟ್ವೀಟ್
ಅತ್ತ ಸುಪ್ರೀಂ ಕೋರ್ಟ್ ನಲ್ಲಿ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪು ಹೊರ ಬೀಳುತ್ತಿದ್ದಂತೆಯೇ ಈ ಬಗ್ಗೆ ಟ್ವೀಟ್ ಮಾಡಿರುವ ಶಶಿಕಲಾ ಬಣದ ಎಐಎಡಿಎಂಕೆ, ಶಶಿಕಲಾ ಅವರು ಸದಾಕಾಲ ಜಯಲಲಿತಾ ಅವರ ಮೇಲಿನ ಹೊರೆಯನ್ನು ತಾವು ಹೊತ್ತಿದ್ದರು. ಈಗಲೂ ಅದು ಮುಂದುವರೆದಿದೆ ಎಂದು ಟ್ವೀಟ್ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


