ರುಬೆಲ್ಲಾ ಲಸಿಕೆ ಹಾಕಿಸಿದ 2 ದಿನಗಳ ನಂತರ 8 ವರ್ಷದ ಬಾಲಕಿ ಸಾವು
ರುಬೆಲ್ಲಾ ಲಸಿಕೆ ಹಾಕಿಸಿದ ಎರಡು ದಿನಗಳ ನಂತರ 8 ವರ್ಷದ ಬಾಲಕಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಅಂಬೂರಿನಲ್ಲಿ ನಡೆದಿದೆ. ಆದರೆ ...

ವೆಲ್ಲೂರು: ರುಬೆಲ್ಲಾ ಲಸಿಕೆ ಹಾಕಿಸಿದ ಎರಡು ದಿನಗಳ ನಂತರ 8 ವರ್ಷದ ಬಾಲಕಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಅಂಬೂರಿನಲ್ಲಿ ನಡೆದಿದೆ. ಆದರೆ ಇದು ರುಬೆಲ್ಲಾ ಲಸಿಕೆ ಕಾರಣದಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.
ಅಂಬೂರಿನ ನಾಚರಕುಪ್ಪಂ ಪಂಚಾಯತ್ ಯೂನಿಯನ್ ಎಲಿಮೆಂಟರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಹರಿಪ್ರಿಯಾ ಮೃತ ದುರ್ದೈವಿ, ಫೆಬ್ರವಿರ 7 ರಂದು ಹರಿಪ್ರಿಯಾಗೆ ಶಾಲೆಯಲ್ಲಿ ರುಬೆಲ್ಲಾ ಲಸಿಕೆ ಹಾಕಿಸಲಾಯಿತು. ಎರಡು ದಿನಗಳ ನಂತರ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿತು. ನಂತರ ಕೆಮ್ಮು ನ್ಯೂಮೋನಿಯಾ ಮತ್ತು ಅಪಸ್ಮಾರಕ್ಕೆ ತಿರುಗಿದೆ. ಕೂಡಲೇ ಆಕೆಯನ್ನು ಅಂಬೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅಲ್ಲಿಂದ ವೆಲ್ಲೂರಿನ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆ ಸೇರುವಷ್ಟರಲ್ಲಿಯೇ ಆಕೆ ಮೃತ ಪಟ್ಟಿದ್ದಳು.
ಬಾಲಕಿಯ ಪೋಷಕರು ರುಬೆಲ್ಲಾ ಲಸಿಕೆಯಿಂದಾಗಿಯೇ ತಮ್ಮ ಮಗಳು ಸಾವನ್ನಪ್ಪಿರುವುದಾಗಿ ಆರೋಪಿಸಿದ್ದಾರೆ. ಆದರೆ ಬಾಲಕಿ ಮರಣೋತ್ತರ ಪರೀಕ್ಷೆ ನಡೆಸಲು ಪೋಷಕರು ನಿರಾಕರಿಸಿದ್ದಾರೆ. ಹರಿಪ್ರಿಯಾ ಅಪಸ್ಮಾರದಿಂದ ಬಳಲುತ್ತಿದ್ದಳು ಹೀಗಾಗಿ ಆಕೆ ಸಾವನ್ನಪ್ಪಿರಬೇಕು. ಮರಣೋತ್ತರ ಪರೀಕ್ಷೆಯಿಂದ ಸಾವಿನ ನಿಖರ ಕಾರಣ ತಿಳಿದುಕೊಳ್ಳಬಹುದಾಗಿದೆ, ಆದರೆ ಅವರ ಪೋಷಕರು ಇದಕ್ಕೆ ಒಪ್ಪುತ್ತಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಹರಿಪ್ರಿಯಾ ವಾಸವಿದ್ದ ಗ್ರಾಮಕ್ಕೆ ಭೇಟಿ ನೀಡಿ ಲಸಿಕೆ ಪಡೆದ ಇತರ ಮಕ್ಕಳನ್ನು ಪರೀಕ್ಷಿಸಿದ್ದಾರೆ, ಆ ಮಕ್ಕಳೆಲ್ಲರೂ ಆರೋಗ್ಯವಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


