ಉತ್ತರಪ್ರದೇಶ ಚುನಾವಣೆ: ಉಚಿತ 'ಮೋದಿ ಜಿಲೇಬಿ' ನೀಡಿ ಬಿಜೆಪಿ ಬೆಂಬಲಿಗರಿಂದ ವಿಶಿಷ್ಟ ಪ್ರಚಾರ
ಉತ್ರರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬಿರುಸಿನ ಪ್ರಚಾರ ಪ್ರಕ್ರಿಯೆಗಳು ಆರಂಭಗೊಂಡಿವೆ. ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಬೆಂಬಲಿಗರು ವಿಶಿಷ್ಟವಾಗಿ ಪ್ರಚಾರ ಮಾಡುತ್ತಿದ್ದು, ಜನರಿಗೆ ಉಚಿತವಾಗಿ 'ಮೋದಿ ಜಿಲೇಬಿ' ನೀಡಿ...

ಲಖನೌ: ಉತ್ರರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬಿರುಸಿನ ಪ್ರಚಾರ ಪ್ರಕ್ರಿಯೆಗಳು ಆರಂಭಗೊಂಡಿವೆ. ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಬೆಂಬಲಿಗರು ವಿಶಿಷ್ಟವಾಗಿ ಪ್ರಚಾರ ಮಾಡುತ್ತಿದ್ದು, ಜನರಿಗೆ ಉಚಿತವಾಗಿ 'ಮೋದಿ ಜಿಲೇಬಿ' ನೀಡಿ ಬಿಜೆಪಿಗೆ ಬೆಂಬಲ ನೀಡಿ ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ.
ಸ್ವೀಟ್ ಅಂಗಡಿಯ ಮಾಲೀಕನಾಗಿರುವ ಸುರೇಶ್ ಸಾಹು ಎಂಬುವವರು ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದು, ಅಕ್ಷರಗಳಲ್ಲಿ ಮೋದಿ ಎಂದು ಬರೆದು, ಜಿಲೇಬಿ ತಯಾರಿಸಿ ಜನರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಇದಲ್ಲದೆ, ಜಿಲೇಬಿ ಮೂಲಕ ಬಿಜೆಪಿ ಪಕ್ಷದ ಚಿಹ್ನೆಯನ್ನೂ ಸುರೇಶ್ ಅವರು ರಚಿಸಿದ್ದು, ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬೆಂಬಲ ನೀಡುವಂತೆ ಜನರಿಗೆ ಮನವಿ ಮಾಡುತ್ತಿದ್ದಾರೆ.
ಜಿಲೇಬಿ ಕುರಿತಂತೆ ಮಾತನಾಡಿರುವ ಸುರೇಶ್ ಅವರು, ಹಲವು ವರ್ಷಗಳಿಂದಲೂ ನಾವು ಬಿಜೆಪಿ ಬೆಂಬಲಿಗರಾಗಿದ್ದೇವೆ. ಕೆಲಸಗಳಲ್ಲಿ ತೊಡಗಿಕೊಂಡಿರುವುದರಿಂದ ಪಕ್ಷದ ಪರವಾಗಿ ಕೆಲಸ ಮಾಡಲು ನನಗೆ ಸಮಯ ಸಿಗುತ್ತಿಲ್ಲ. ಹೀಗಾಗಿ ಈ ಮೂಲಕವೇ ಬಿಜೆಪಿಗೆ ಬೆಂಬಲ ನೀಡುತ್ತಿದ್ದೇನೆಂದು ಹೇಳಿದ್ದಾರೆ.
ಇನ್ನು ಸುರೇಶ್ ಅವರ ಯತ್ನಕ್ಕೆ ಸ್ಥಳೀಯರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಮನೆಯಿಂದ ಹೊರ ಬರುತ್ತಿದ್ದಂತೆ ಜಿಲೇಬಿಗಳನ್ನು ನೋಡಿದೆ. ಮೋದಿಯವರ ಹೆಸರನ್ನು ಜಿಲೇಬಿ ಮೂಲಕ ಬರೆಯಲಾಗಿತ್ತು. ನಿಜಕ್ಕೂ ಸಂತಸವಾಯಿತು ಎಂದು ಬಿಜೆಪಿ ನಾಯಕ ಕೌಶರ್ ಕಿಶೋರ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


