ರಾಷ್ಟ್ರೀಯತೆಯಲ್ಲಿ ಮುಸ್ಲಿಮರೂ ಹಿಂದೂಗಳೇ: ಮೋಹನ್ ಭಾಗವತ್
ಮುಸ್ಲಿಮರು ಪ್ರಾರ್ಥನೆ ಮಾಡುವ ರೀತಿ ಬೇರೆಯೇ ಆದರೂ, ರಾಷ್ಟ್ರೀಯತೆ ಬಂದಾಗ ಅವರೂ ಕೂಡ ಹಿಂದೂಗಳೇ ಎಂದು ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು...

ಬೇತುಲ್: ಮುಸ್ಲಿಮರು ಪ್ರಾರ್ಥನೆ ಮಾಡುವ ರೀತಿ ಬೇರೆಯೇ ಆದರೂ, ರಾಷ್ಟ್ರೀಯತೆ ಬಂದಾಗ ಅವರೂ ಕೂಡ ಹಿಂದೂಗಳೇ ಎಂದು ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುರುವಾರ ಹೇಳಿದ್ದಾರೆ.
ಮಧ್ಯಪ್ರದೇಶದ ಬೇತುಲ್ ನಲ್ಲಿ ನಡೆದ ಹಿಂದೂ ಸಮ್ಮೇಳನದಲ್ಲಿ ಮಾತನಾಡಿರುವ ಅವರು, ಹಿಂದೂಸ್ತಾನದಲ್ಲಿ ವಾಸ ಮಾಡುವ ಎಲ್ಲಾ ಜನರು ಮತ್ತು ಹಿಂದೂ ಸಂಸ್ಕೃತಿಯನ್ನು ಗೌರವಿಸುವ ಎಲ್ಲರೂ ಹಿಂದೂಗಳೇ. ಮುಸ್ಲಿಮರು ಪ್ರಾರ್ಥನೆ ಮಾಡುವ ರೀತಿ ಬೇರೆಯೇ ಆದರೂ, ರಾಷ್ಟ್ರೀಯತೆಯ ಅನುಸಾರವಾಗಿ ಅವರೂ ಕೂಡ ಹಿಂದೂಗಳೇ ಆಗಿರುತ್ತಾರೆಂದು ಪ್ರತಿಪಾದಿಸಿದ್ದಾರೆ.
ಇಡೀ ಪ್ರಪಂಚದಲ್ಲಿ ಭಾರತೀಯ ಸಮಾಜವನ್ನು ಹಿಂದೂ ಎಂದೇ ಪರಿಗಣಿಸಲಾಗುತ್ತದೆ. ಎಲ್ಲಾ ಭಾರತೀಯರು ಹಿಂದೂಗಳೇ ಹಾಗೂ ನಾವೆಲ್ಲರೂ ಒಂದೇ. ಹಿಂದೂಗಳು ದೇಶದ ಗೌರವ ಹಾಗೂ ಸಂಸ್ಕೃತಿಯಿನ್ನು ಬಹಳ ಎಚ್ಚರಿಕೆಯಿಂದ ಕಾಪಾಡಬೇಕಿದೆ. ನಮ್ಮ ಜಾತಿ, ಮತ, ಸಂಸ್ಕೃತಿ ಮತ್ತು ಭಾಷೆಗಳು ಭಿನ್ನತೆಗಳನ್ನು ಒಳಗೊಂಡಿರಬಹುದು. ಆದರೆ, ಹೃದಯದ ಭಾಷೆ ಒಂದೇ ಆಗಿರುತ್ತದೆ. ವಿವಿಧತೆಗಳು ಸುಂದರವಾಗಿರಬಹುದು. ಆದರೆ ಅದರಲ್ಲಿ ಏಕತೆ ಇರಬೇಕು. ವಿಶ್ವದ ಹೊರಗೆ ಏಕತೆ ಕಾಣಿಸುತ್ತದೆ. ಆದರೆ, ನಮ್ಮ ದೇಶದಲ್ಲಿ ಏನಾಗುತ್ತಿದೆ. ನಮ್ಮ ದೇಶದಲ್ಲಿ ಏಕತೆಯೆಂಬುದು ಕಣ್ಮರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


