ದೇಶ

ನೋಟು ನಿಷೇಧ ಬಳಿಕ ಭರ್ಜರಿ ಕಾರ್ಯಾಚರಣೆ: ಅಘೋಷಿತ ರೂ.5,400 ಕೋಟಿ ಆದಾಯ ಪತ್ತೆ

ರೂ.500 ಹಾಗೂ 1,000 ದುಬಾರಿ ನೋಟುಗಳ ಮೇಲೆ ನಿಷೇಧ ಹೇರಿದ ಬಳಿ. ಅಧಿಕಾರಿಗಳು 1,1000 ಶೋಧನಾ ಕಾರ್ಯಾಚರಣೆಗಳನ್ನು ನಡೆಸಿದ್ದು, ಅಘೋಷಿತ ರೂ.5, 4000 ಕೋಟಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ...

ನೋಟು ನಿಷೇಧ ಬಳಿಕ ಭರ್ಜರಿ ಕಾರ್ಯಾಚರಣೆ: ಅಘೋಷಿತ ರೂ.5,400 ಕೋಟಿ ಆದಾಯ ಪತ್ತೆ
ಆದಾಯ ತೆರಿಗೆ ಇಲಾಖೆ
Published On :

ನವದೆಹಲಿ: ರೂ.500 ಹಾಗೂ 1,000 ದುಬಾರಿ ನೋಟುಗಳ ಮೇಲೆ ನಿಷೇಧ ಹೇರಿದ ಬಳಿ. ಅಧಿಕಾರಿಗಳು 1,1000 ಶೋಧನಾ ಕಾರ್ಯಾಚರಣೆಗಳನ್ನು ನಡೆಸಿದ್ದು, ಅಘೋಷಿತ ರೂ.5, 4000 ಕೋಟಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಸಂತೋಷ್ ಕುಮಾರ್ ಅವರು ಹೇಳಿದ್ದಾರೆ.

ಆಘೋಷಿತ ಹಣ ವಶ ಕುರಿತಂತೆದ ಇಂದು ಶಿಮ್ಲಾ ಸಂಸತ್ ಸದಸ್ಯ ವೀರೇಂದ್ರ ಕಶ್ಯಪ್ ಹಾಗೂ ಲೋಕಸಭೆಯ ಸದಸ್ಯರಿಗೆ ಮಾಹಿತಿ ನೀಡಿರುವ ಅವರು, ದುಬಾರಿ ನೋಟುಗಳ ಮೇಲೆ ನಿಷೇಧ ಹೇರಿದ ಬಳಿಕ ನ.9 2016ರಿಂದ ಜ.10 2017ರ ವರೆಗೆ ಹೆಚ್ಚಿನ ಮೌಲ್ಯದ ಹಳೇ ನೋಟುಗಳ ಸಂಶಯಾಸ್ಪದ ಠೇವಣಿಗಳ ಪರಿಶೀಲನೆ ನಡೆಸಲಾಗಿತ್ತು. ಈ ವರೆಗೂ 1,100 ಶೋಧ ಕಾರ್ಯಾಚರಣೆ, ಮುಟ್ಟುಗೋಲು ಮತ್ತು ಸಮೀಕ್ಷೆಗಳನ್ನು ನಡೆಸಲಾಗಿದೆ. ಅಲ್ಲದೆ, 2100 ನೋಟಿಸ್ ಜಾರಿ ಗೊಳಿಸಿದೆ ಎಂದು ಹೇಳಿದ್ದಾರೆ.

ಪರಿಶೀಲನೆ ವೇಳೆ ರೂ.610 ಕೋಟಿ ವೆಚ್ಚದ ಅಮೂಲ್ಯ ವಸ್ತುಗಳು, ರೂ. 513 ಕೋಟಿ ನಗದು ಹಾಗೂ ಬಂಗಾರ ಮತ್ತು ಬೆಳ್ಳಿ ರೂಪದಲ್ಲಿದ್ದ ಇತರ ವಸ್ತುಗಳನ್ನುವಶಕ್ಕೆ ಪಡೆಯಲಾಗಿದೆ. ಇದರಲ್ಲಿ ರೂ. 110 ಕೋಟಿ ಹೊಸ ನೋಟುಗಳೂ ಕೂಡ ಒಳಗೊಂಡಿದ್ದು, ತನಿಖೆ ವೇಳೆ ಅಘೋಷಿತ ರೂ. 540 ಕೋಟಿ ಆದಾಯ ಪತ್ತೆ ಹೆಚ್ಚಲಾಗಿದೆ ಗಂಗ್ವಾರ್ ಅವರು ಲಿಖಿತ ಪತ್ರದಲ್ಲಿ ತಿಳಿಸಿದ್ದಾರೆ.

ನ.8 2016ರ ವರೆಗೆ ರೂ.500  17,165 ಮಿಲಿಯನ್ ನೋಟುಗಳು ಹಾಗೂ ರೂ.1000 6,558 ಮಿಲಿಯನ್ ನೋಟುಗಳು ಚಲಾವಣೆಯಲ್ಲಿತ್ತು. ಇದರಲ್ಲಿ ಡಿ.10. 2016 ರ ವೇಳೆಗೆ 12.44 ಲಕ್ಷ ಕೋಟಿ ಆರ್ ಬಿಐ ಗೆ ಹಿಂದಿರುಗಿಸಲಾಗಿದೆ ಎಂದು ಹೇಳಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಹಳೇ ನೋಟುಗಳನ್ನು ಠೇವಣಿ ಮಾಡಿದ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.