ಕಾಂಗ್ರೆಸ್ ಸೇರಲು ಬಯಸಿದ್ದ ಗೋಪಿನಾಥ್ ಮುಂಡೆ ಅವರನ್ನು ಮನಮೋಹನ್ ಸಿಂಗ್ ತಡೆದಿದ್ದರು: ಅಜಿತ್ ಪವಾರ್
ಬಿಜೆಪಿ ಹಿರಿಯ ಮುಖಂಡ ದಿವಂಗತ ಗೋಪಿನಾಥ್ ಮುಂಡೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಬಯಸಿದ್ದರು ಎಂಬ ವಿಷಯವನ್ನು ಎನ್ ಸಿಪಿ ಹಿರಿಯ ಮುಖಂಡ ಅಜಿತ್...

ಮುಂಬಯಿ: ಬಿಜೆಪಿ ಹಿರಿಯ ಮುಖಂಡ ದಿವಂಗತ ಗೋಪಿನಾಥ್ ಮುಂಡೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಬಯಸಿದ್ದರು ಎಂಬ ವಿಷಯವನ್ನು ಎನ್ ಸಿಪಿ ಹಿರಿಯ ಮುಖಂಡ ಅಜಿತ್ ಪವಾರ್ ಬಹಿರಂಗಗೊಳಿಸಿದ್ದಾರೆ.
ಗೋಪಿನಾಥ್ ಮುಂಡೆ ತಮ್ಮ ಬೆಂಬಲಿಗ ಶಾಸಕರೊಂದಿಗೆ ಕಾಂಗ್ರೆಸ್ ಸೇರಲು ಬಯಸಿದ್ದರು, ಮುಂಡೆ ಅವರ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಲಹೆ ನೀಡಿದ್ದರು ಅವರು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಡೆಪ್ಯೂಟಿ ಸ್ಪೀಕರ್ ಆಗಿದ್ದ ಮುಂಡೆ ತಮ್ಮ ಬೆಂಬಲಿಗ ಶಾಸಕರಾದ ಪಾಶಾ ಪಟೇಲ್, ಮಾಧುರಿ ಮಿಸಲ್, ಪ್ರಕಾಶ್ ಶೆಂಡ್ಗೆ, ಪಂಕಜಾ ಮುಂಡೆ ಬಿಜೆಪಿ ತೊರೆಯಲು ಸಿದ್ಧರಿದ್ದರು ಎಂದು ಎನ್ ಸಿಪಿ ಪರಮೋಚ್ಚ ನಾಯಕ ಶರದ್ ಪವಾರ್ ಅವರ ಸಂಬಂಧಿ ಅಜಿತ್ ಪವಾರ್ ದೂರಿದ್ದಾರೆ.
ಪಕ್ಷವನ್ನು ಒಡೆಯುವುದು ಸರಿಯಲ್ಲ, ಹೀಗಾಗಿ ಮುಂಡೆ ಕಾಂಗ್ರೆಸ್ ಸೇರುವುದು ಬೇಡ ಎಂದು ಮನಮೋಹನ್ ಸಿಂಗ್ ತಡೆದಿದ್ದರು. 1995-1999 ರಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರದಲ್ಲಿ ಗೋಪಿನಾಥ್ ಮುಂಡೆ ಉಪ ಮುಖ್ಯಮಂತ್ರಿಯಾಗಿದ್ದರು.2009 ರಲ್ಲಿ ಲೋಕಸಭೆಯ ಡೆಪ್ಯೂಟಿ ಸ್ಪೀಕರ್ ಕೂಡ ಆಗಿದ್ದರು. ಜೂನ್ 3 2014 ರಲ್ಲಿ ಗೋಪಿನಾಥ್ ಮುಂಡೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


