ದೇಶ

ಕಾಡುಗಳ್ಳ ವೀರಪ್ಪನ್ ಗೆ ಅದ್ಭುತವಾದ ಸಿಕ್ಸ್ತ್ ಸೆನ್ಸ್ ಇತ್ತು: ಎಸ್ ಟಿ ಎಫ್ ಅಧಿಕಾರಿ

ನರಹಂತಕ, ಕಾಡುಗಳ್ಳ ವೀರಪ್ಪನ್ ಹತ್ಯೆಯಾಗಿ ಸರಿಸುಮಾರು 13 ವರ್ಷಗಳೇ ಕಳೆದಿವೆ, ವೀರಪ್ಪನ್ ಹತ್ಯೆಯ ವೇಳೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ...

ಕಾಡುಗಳ್ಳ ವೀರಪ್ಪನ್ ಗೆ ಅದ್ಭುತವಾದ ಸಿಕ್ಸ್ತ್ ಸೆನ್ಸ್ ಇತ್ತು: ಎಸ್ ಟಿ ಎಫ್ ಅಧಿಕಾರಿ
ವೀರಪ್ಪನ್ ಮತ್ತು ಪತ್ನಿ ಮುತ್ತು ಲಕ್ಷ್ಮಿ
Published On :

ನವದೆಹಲಿ: ನರಹಂತಕ, ಕಾಡುಗಳ್ಳ ವೀರಪ್ಪನ್ ಹತ್ಯೆಯಾಗಿ ಸರಿಸುಮಾರು 13 ವರ್ಷಗಳೇ ಕಳೆದಿವೆ, ವೀರಪ್ಪನ್ ಹತ್ಯೆಯ ವೇಳೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ತಮಿಳುನಾಡು ಸ್ಪೆಷಲ್ ಟಾಸ್ಕ್ ಪೋರ್ಸ್ ಅಧಿಕಾರಿ ವೀರಪ್ಪನ್ ಬಗ್ಗೆ ಹಲವು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ವೀರಪ್ಪನ್ ಗೆ ಅತ್ಯದ್ಭುತವಾದ ಸಿಕ್ಸ್ತ್ ಸೆನ್ಸ್ ಇತ್ತು ಹೇಳಿದ್ದಾರೆ.

ಒಂದು ದಿನ ಆತನ ಎಡ ಭುಜದ ಮೇಲೆ ಹಲ್ಲಿ ಬಿತ್ತು, ಇದರಿಂದ ವಿಚಲಿತನಾದ ಆತನ ಅದು ಕೆಡುಕಿನ ಸಂಕೇತ ಎಂದು ಹೇಳಿದ ಆತ, ಕೂಡಲೇ ತನ್ನ ಎಡಭಾಗಕ್ಕೆ ತಿರುಗಿ ಎದುರುಗಿದ್ದವರ ಜೊತೆ ಮಾತನಾಡುವುದನ್ನು ನಿಲ್ಲಿಸಿದ. ಕೊಲ್ಲುವ ಮೊದಲು ಕವಡೆ ಬಳಸಿ ತನ್ನ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದ. ಒಮ್ಮೆ ಪೊಲೀಸ್ ಮಾಹಿತಿದಾರನನ್ನು ಕೊಲ್ಲುವ ಮೊದಲು ವೀರಪ್ಪನ್ ಕವಡೆ ಹಾಕಿದ್ದ, ಆ ಸಮಯದಲ್ಲಿ ಬೆಸಸಂಖ್ಯೆ ಬಂದಿತ್ತು ಎಂದು ಅಧಿಕಾರಿ ವಿಜಯ್ ಕುಮಾರ್ ಸುದ್ದಿ ಸಂಸ್ಥೆಯ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ವಿಜಯ್ ಕುಮಾರ್ ಹೊರ ತರುತ್ತಿರುವ ವೀರಪ್ಪನ್: ಚೇಸಿಂಗ್ ದ ಬ್ರಿಗಂಡ್ ಎಂಬ ಪುಸ್ತಕದಲ್ಲಿ ವೀರಪ್ಪನ್ ಕುರಿತಾದ ಹಲವು ಮಾಹಿತಿಗಳಿವೆ. ಬುಧವಾರ ಈ ಪುಸ್ತಕವನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬಿಡುಗಡೆ ಮಾಡಲಿದ್ದಾರೆ.

ವೀರಪ್ಪನ್ ಕಾರ್ಯಾಚರಣೆ ವೇಳೆ ನಡೆದ ಅನೇಕ ಘಟನೆಗಳ ಬಗ್ಗೆ ಪುಸ್ತಕದಲ್ಲಿ ವಿಜಯ್ ಕುಮಾರ್ ಮಾಹಿತಿಗಳನ್ನು ತಿಳಿಸಿದ್ದಾರೆ.  ಸಣ್ಣ ಬೇಟೆಗಾರನೊಬ್ಬ ಎರಡು ದಶಕಗಳ ಕಾಲ ಮೂರು ರಾಜ್ಯಗಳಲ್ಲಿ ಶ್ರೀಗಂಧ ಕಳ್ಳತನ, ದಂತ ಕಳ್ಳತನ ಮಾಡಿ ವಾಂಟೆಡ್ ಡಕಾಯಿತನಾದ ವೀರಪ್ಪನ್ ಜೀವನದ ಹಲವು ವಿಷಯಗಳ ಬಗ್ಗೆ ಈ ಪುಸ್ತಕದಲ್ಲಿ ಮಾಹಿತಿ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.