ದೇಶ

ದೆಹಲಿ ಸೇರಿ ಉತ್ತರ ಭಾರತದ ಹಲವೆಡೆ ಲಘು ಭೂಕಂಪನ: 5.8ರಷ್ಟು ತೀವ್ರತೆ ದಾಖಲು

ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಸೋಮವಾರ ರಾತ್ರಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿದೆ...

ದೆಹಲಿ ಸೇರಿ ಉತ್ತರ ಭಾರತದ ಹಲವೆಡೆ ಲಘು ಭೂಕಂಪನ: 5.8ರಷ್ಟು ತೀವ್ರತೆ ದಾಖಲು
ಸಂಗ್ರಹ ಚಿತ್ರ
Published On :

ನವದೆಹಲಿ: ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಸೋಮವಾರ ರಾತ್ರಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿದೆ.

ದೆಹಲಿ, ಉತ್ತರಪ್ರದೇಶ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತಾರಾಖಂಡಗಳಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿದೆ. ಕಳೆದ ರಾತ್ರಿ 10.30ರ ವೇಳೆ ಸುಮಾರು 30 ಸೆಕೆಂಡ್ ಗಳ ಕಾಲ ಭೂಕಂಪನದ ಅನುಭವವಾಗಿದ್ದು, ಪ್ರಾಣಭೀತಿಯಿಂದ ಜನರು ಮನೆ, ಕಚೇರಿ ಬಿಟ್ಟು ಹೊರಗೆ ಓಡಿದ್ದಾರೆ. ಭೂಕಂಪದ ತೀವ್ರತೆ 5.8ರಷ್ಟು ದಾಖಲಾಗಿದೆ.

ಭೂಕಂಪನದ ಕೇಂದ್ರ ಉತ್ತರಾಖಂಡದ ಪಿತೋರ್ ಘಡದಲ್ಲಿ 21 ಕಿ.ಮೀ ಆಳದಲ್ಲಿ ಕಂಡುಬಂದಿದೆ. ಭೂಕಂಪನದಲ್ಲಿ ಯಾವುದೇ ಆಸ್ತಿ, ಪ್ರಾಣ ಹಾನಿಗಳು ಸಂಭವಿಸಿಲ್ಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.