ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವ ರಕ್ಷಣೆ, ಅದರಿಂದಾಗಿಯೇ ಮೋದಿ ಪ್ರಧಾನಿಯಾಗಿದ್ದು: ಖರ್ಗೆ
ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಂಗ್ರೆಸ್ ಕಾಪಾಡಿಕೊಂಡು ಬಂದಿದ್ದರಿಂದ ಬಡ ಕುಟುಂಬದಲ್ಲಿ ಹುಟ್ಟಿದರು ನರೇಂದ್ರ ಮೋದಿ ಅವರು ಪ್ರಧಾನಿಯಾಗಲು...

Published On :
ನವದೆಹಲಿ: ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಂಗ್ರೆಸ್ ಕಾಪಾಡಿಕೊಂಡು ಬಂದಿದ್ದರಿಂದ ಬಡ ಕುಟುಂಬದಲ್ಲಿ ಹುಟ್ಟಿದರು ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಸಾಧ್ಯವಾಯಿತು ಎಂದು ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
70 ವರ್ಷಗಳ ಕಾಲ ಸುದೀರ್ಘ ಅಧಿಕಾರ ನಡೆಸಿದರು ಕಾಂಗ್ರೆಸ್ ಏನು ಮಾಡಿಲ್ಲ ಎಂದು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಆರೋಪಿಸಿತ್ತಾ ಬಂದಿತ್ತು. ಈ ಸಂಬಂಧ ಪ್ರತಿಕ್ರಿಯಿಸಿರುವ ಮಲ್ಲಿಕಾರ್ಜುನ್ ಖರ್ಗೆ ಅವರು 70 ವರ್ಷಗಳಿಂದ ಕಾಂಗ್ರೆಸ್ ಪ್ರಜಾಪ್ರಭುತ್ವ ವ್ಯವಸ್ಥೆಯ ಸಮತೋಲನವನ್ನು ಕಾಯ್ಗುಕೊಂಡು ಬಂದಿದೆ ಎಂದರು.
ಗುಜರಾತ್ ನಲ್ಲಿ ಹಸಿರು ಕ್ರಾಂತಿ ಮತ್ತು ಕ್ಷೀರ ಕಾಂತ್ರಿ ನಿಮ್ಮ ಅಧಿಕಾರವಧಿಯಲ್ಲೆ ಆಗಿದೆ ಅಂತೀರಾ. ಆಗಾದರೇ ವರ್ಗಿಸ್ ಕುರಿಯಾನ್ ಅವರು ನಿಮ್ಮ ಕಾಲಾವಧಿಯಲ್ಲಿ ಹುಟ್ಟಿದ್ದರಾ? ಎಲ್ಲಾ ಕಳೆದ ಎರಡೂವರೆ ವರ್ಷದಲ್ಲಿ ಆಯಿತಾ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಆಹಾರ ಭದ್ರತೆಗಾಗಿ ನಾವು ಹಸಿರು ಕಾಂತ್ರಿ ತಂದಿದ್ದು, ಕ್ಷೀರ ಕಾಂತ್ರಿಯನ್ನು ನಾವು ತಂದಿದ್ದು, ಆದರೆ ನೀವು 70 ವರ್ಷದಲ್ಲಿ ಏನು ಮಾಡಿದರು ಎಂದು ನಮ್ಮನ್ನು ಪ್ರಶ್ನೆ ಮಾಡುತ್ತೀರಾ, ಇದೆಲ್ಲವೂ ಆಗದಿದ್ದರೆ, ನೀವು ಜೀವಂತವಾಗಿರುತ್ತಿರಲಿಲ್ಲ. ನಾವು ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬಂದಿದ್ದರಿಂದಲೇ ಇದೆಲ್ಲಾ ಸಾಧ್ಯವಾಗಿದ್ದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿCongressಕಾಂಗ್ರೆಸ್Mallikarjun khargeDemocracyಪ್ರಜಾಪ್ರಭುತ್ವಮಲ್ಲಿಕಾರ್ಜುನ್ ಖರ್ಗೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


