ದೇಶ

ಜಮ್ಮು-ಕಾಶ್ಮೀರ: ಹೊರ ರಾಜ್ಯದವರಿಗೆ ಫಾರ್ಮಸಿ ತೆರೆಯಲು ಅವಕಾಶ ವಿರೋಧಿಸಿ ಪ್ರತಿಭಟನೆ!

ಜಮ್ಮು-ಕಾಶ್ಮೋರದಲ್ಲಿ ವೈದ್ಯಕೀಯ ಪೂರೈಕೆಗಳ ನಿಗಮ ದೆಹಲಿ ಮೂಲದ ವ್ಯಕ್ತಿಗೆ ರಾಜ್ಯದಲ್ಲಿ ಫಾರ್ಮಸಿ ತೆರೆಯಲು ಟೆಂಡರ್ ನೀಡಿರುವುದು ರಾಜ್ಯದಲ್ಲಿ ಪ್ರತಿಭಟನೆಗೆ ಕಾರಣವಾಗಿದೆ.

ಜಮ್ಮು-ಕಾಶ್ಮೀರ: ಹೊರ ರಾಜ್ಯದವರಿಗೆ ಫಾರ್ಮಸಿ ತೆರೆಯಲು ಅವಕಾಶ ವಿರೋಧಿಸಿ ಪ್ರತಿಭಟನೆ!
ಜಮ್ಮು-ಕಾಶ್ಮೀರದಲ್ಲಿನ ಪ್ರತಿಭಟನೆ( ಸಂಗ್ರಹ ಚಿತ್ರ)
Published On :
ಶ್ರೀನಗರ: ಜಮ್ಮು-ಕಾಶ್ಮೋರದಲ್ಲಿ ವೈದ್ಯಕೀಯ ಪೂರೈಕೆಗಳ ನಿಗಮ ದೆಹಲಿ ಮೂಲದ ವ್ಯಕ್ತಿಗೆ ರಾಜ್ಯದಲ್ಲಿ ಫಾರ್ಮಸಿ ತೆರೆಯಲು ಟೆಂಡರ್ ನೀಡಿರುವುದು ರಾಜ್ಯದಲ್ಲಿ ಪ್ರತಿಭಟನೆಗೆ ಕಾರಣವಾಗಿದೆ. ಹೊರ ರಾಜ್ಯದವರಿಗೆ ಫಾರ್ಮಸಿ ತೆರೆಯಲು ಅನುಮತಿ ನೀಡುವುದು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರ ಉಲ್ಲಂಘನೆಯಾಗಲಿದೆ ಎಂದು ಸ್ಥಳೀಯ ಫಾರ್ಮಸಿಗಳನ್ನು ನಡೆಸುವವರು ಪ್ರತಿಭಟನೆ ನಡೆಸಿದ್ದಾರೆ. 
ಜೆಕೆಎಂಎಸ್ ಸಿಎಲ್ ಜಮ್ಮು-ಕಾಶ್ಮೀರದಲ್ಲಿ 57 ಫಾರ್ಮಸಿಗಳನ್ನು ಪ್ರಾರಂಭಿಸಲು ದೆಹಲಿ ಮೂಲದ ವ್ಯಕ್ತಿಗೆ ಟೆಂಡರ್ ಘೋಷಿಸಿತ್ತು. ಈ ಬಗ್ಗೆ ಸ್ಥಳೀಯವಾಗಿ ಫಾರ್ಮಸಿಗಳನ್ನು ನಡೆಸುವ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಪಿಡಿಪಿ-ಬಿಜೆಪಿ ಸರ್ಕಾರದ ಆರೋಗ್ಯ ಸಚಿವ ನಿರ್ಮಲ್ ಸಿಂಗ್, ರಾಜ್ಯಕ್ಕೆ ನೀಡಲಾಗಿರುವ ಆರ್ಟಿಕಲ್ 370 ರ ಉಲ್ಲಂಘನೆಯಾಗುವಂತೆ ಅನ್ಯ ರಾಜ್ಯದವರಿಗೆ ಫಾರ್ಮಸಿ ತೆರೆಯಲು ಅನುಮತಿ ಹೇಗೆ ನೀಡಲಾಯಿತು ಎಂಬ ಬಗ್ಗೆ ತನಿಖೆ ನಡೆಸುವುದರ ಬಗ್ಗೆ ಭರವಸೆ ನೀಡಿದ್ದು, ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.