ದೇಶ

ಚಲಾವಣೆಗೆ ಬರಲಿದೆ ಹೊಸ 100 ರು. ನೋಟು!

500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ ಹೊಸ 500 ಮತ್ತು 2000 ರು.ಮುಖಬೆಲೆಯ ನೋಟುಗಳನ್ನು ಜಾರಿಗೆ ತಂದಿದ್ದ ಆರ್ ಬಿಐ ಇದೀಗ 100 ರು.ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರಲು ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿದೆ.

ಚಲಾವಣೆಗೆ ಬರಲಿದೆ ಹೊಸ 100 ರು. ನೋಟು!
ಸಂಗ್ರಹ ಚಿತ್ರ
Published On :

ನವದೆಹಲಿ: 500 ಮತ್ತು 1000 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿ ಹೊಸ 500 ಮತ್ತು 2000 ರು.ಮುಖಬೆಲೆಯ ನೋಟುಗಳನ್ನು ಜಾರಿಗೆ ತಂದಿದ್ದ ಆರ್ ಬಿಐ ಇದೀಗ 100 ರು.ಮುಖಬೆಲೆಯ ಹೊಸ ನೋಟುಗಳನ್ನು  ಚಲಾವಣೆಗೆ ತರಲು ಸಕಲ ಸಿದ್ಧತೆಗಳನ್ನು ನಡೆಸಿಕೊಂಡಿದೆ.

ಪ್ರಸ್ತುತ ಇರುವ ಅಂದರೆ ಮಹಾತ್ಮಗಾಂಧಿ ಸರಣಿಯ 2005ರ ನೋಟುಗಳ ವಿನ್ಯಾಸದಲ್ಲೇ ಹೊಸ ನೋಟುಗಳು ಇರಲಿದ್ದು, ಮುದ್ರಣ ವರ್ಷ ಮಾತ್ರ 2017 ಎಂದು ನೋಟಿನ ಹಿಂಭಾಗದಲ್ಲಿ ಮುದ್ರಣವಾಗಲಿದೆ. ನೋಟಿನ ನಂಬರ್  ನಲ್ಲಿ ಆರ್ ಸರಣಿಯಿಂದ ಇರಲಿದ್ದು, ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿಯನ್ನು ಹೊಂದಿರಲಿದೆ. ಉಳಿದಂತೆ ನೋಟಿನ ಮೇಲಿನ ಸಂಖ್ಯೆಗಳ ಗಾತ್ರ ಚಿಕ್ಕದಾಗಿರಲಿದ್ದು, ನೋಟಿನ ಸುರಕ್ಷತೆಯ ಎಳೆ, ಗುರುತಿನ  ಚಿನ್ಹೆಯನ್ನು ಹೊಂದಿರಲಿದೆ.

ಹಳೆಯ ನೋಟಿನ ಗತಿ ಏನು?
ಇನ್ನು ಹೊಸ 100 ಮುಖಬೆಲೆಯ ನೋಟುಗಳು ಚಲಾವಣೆಗೆ ಬರುವದರಿಂದ ಹಳೆಯ ನೋಟುಗಳು ನಿಷೇಧವಾಗುತ್ತದೆಯೇ ಎಂಬ ಶಂಕೆ ಮೂಡಬಹದು. ಹೀಗಾಗಿ ಇದಕ್ಕೂ ಆರ್ ಬಿಐ ಉತ್ತರ ನೀಡಿದ್ದು, ಹಳೆಯ ನೋಟುಗಳು  ಯಥಾ ಸ್ಥಿತಿಯಲ್ಲೇ ಚಲಾವಣೆಯಲ್ಲಿ ಮುಂದುವರೆಯಲಿವೆ. ಅವುಗಳ ಚಲಾವಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅವುಗಳ ಜೊತೆ-ಜೊತೆಗೇ ಈ ಹೊಸ ನೋಟುಗಳು ಕೂಡ ಚಲಾವಣೆ ಬರಲಿವೆ ಎಂದು ಆರ್ ಬಿಐ  ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.