ದೇಶ

ವಿಧಾನಸಭಾ ಚುನಾವಣೆ 2017: ಪಂಜಾಬ್ ಶೇ.50, ಗೋವಾ ಶೇ.67ರಷ್ಟು ಮತದಾನ

ಪಂಜಾಬ್ ಹಾಗೂ ಗೋವಾ ರಾಜ್ಯಗಳಲ್ಲಿ ಏಕಹಂತದಲ್ಲಿ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿದ್ದು, ಈ ವರೆಗೂ ಪಂಜಾಬ್ ನಲ್ಲಿ ಶೇ.50 ಹಾಗೂ ಗೋವಾದಲ್ಲಿ ಶೇ.67 ರಷ್ಟು ಮತದಾನವಾಗಿದೆ...

ವಿಧಾನಸಭಾ ಚುನಾವಣೆ 2017: ಪಂಜಾಬ್ ಶೇ.50, ಗೋವಾ ಶೇ.67ರಷ್ಟು ಮತದಾನ
ಸಂಗ್ರಹ ಚಿತ್ರ
Published On :

ನವದೆಹಲಿ: ಪಂಜಾಬ್ ಹಾಗೂ ಗೋವಾ ರಾಜ್ಯಗಳಲ್ಲಿ ಏಕಹಂತದಲ್ಲಿ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿದ್ದು, ಈ ವರೆಗೂ ಪಂಜಾಬ್ ನಲ್ಲಿ ಶೇ.50 ಹಾಗೂ ಗೋವಾದಲ್ಲಿ ಶೇ.67 ರಷ್ಟು ಮತದಾನವಾಗಿದೆ.

ಪಂಜರಾಜ್ಯಗಳ ಚುನಾವಣೆ ಪೈಕಿ ಇಂದು ಗೋವಾ ಹಾಗೂ ಪಂಜಾಬ್ ರಾಜ್ಯಗಳಲ್ಲಿ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಈ ಎರಡೂ ರಾಜ್ಯಗಳಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತೀವ್ರ ಪೈಪೋಟಿ ನಡೆಸುತ್ತಿವೆ. ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷ ಅಖಾಡಕ್ಕೆ ಇಳಿದಿದ್ದು, ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದೆ. ಈವರೆಗೆ ಪಂಜಾಬ್ ರಾಜ್ಯದಲ್ಲಿ ಶೇ.50 ರಷ್ಟು ಮತದಾನವಾಗಿದ್ದರೆ, ಗೋವಾದಲ್ಲಿ ಶೇ.67ರಷ್ಟು ಮತದಾನವಾಗಿರುವುದಾಗಿ ತಿಳಿದುಬಂದಿದೆ.

ಬಿಜೆಪಿ ಪಂಜಾಬ್ ನಲ್ಲಿ ಶಿರೋಮಣಿ ಅಕಾಲಿದಳದ ಜೊತೆ ಮೈತ್ರಿ ಮಾಡಿಕೊಂಡಿದ್ದು, ಮೂರನೇ ಬಾರಿ ಅಧಿಕಾರಕ್ಕೇರುವ ಸಿದ್ಧತೆ ನಡೆಸಿದೆ. ಆದರೆ, ಗೋವಾದಲ್ಲಿ ಬಿಜೆಪಿ ಮಿತ್ರ ಪಕ್ಷ ಮಹಾರಾಷ್ಟ್ರವಾದಿ ಗೋಮಂತ್ರಕ್ ಪಕ್ಷ ಬಿಜೆಪಿಯೊಂದಿನ ನಂಟು ತೊರೆದು ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಪಂಜಾಬ್ ರಾಜ್ಯದಲ್ಲಿ 117 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,145 ಅಭ್ಯರ್ಥಿಗಳಿ ಕಣದಲ್ಲಿ ನಿಂತಿದ್ದು, 1.98 ಕೋಟಿ ಮತದಾರರು ಇವರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಇನ್ನೂ ಗೋವಾದಲ್ಲಿಯೂ 40 ವಿಧಾನಸಭಾ ಕ್ಷೇತ್ರಗಳಲ್ಲಿ 250 ಅಭ್ಯರ್ಥಿಗಳಿದ್ದು, 11 ಲಕ್ಷ ಮತದಾರರು ಇವರ ಭವಿಷ್ಯ ನಿರ್ಧರಿಸಲಿದ್ದಾರೆ.

ರೂ.500 ಹಾಗೂ 1,000 ನೋಟುಗಳ ಮೇಲೆ ನಿಷೇಧ ಹೇರಿದ ಬಳಿಕ ಪಂಜ ರಾಜ್ಯಗಳ ಚುನಾವಣೆ ಬಿಜೆಪಿಗೆ ಇದು ದೊಡ್ಡ ಅಗ್ನಿ ಪರೀಕ್ಷೆಯಾಗಿದೆ. ಗೋವಾ ಹಾಗೂ ಪಂಜಾಬ್ ರಾಜ್ಯಗಳ ಚುನಾವಣೆ ಬಳಿಕ ಉತ್ತರಾಖಂಡ, ಉತ್ತರಪ್ರದೇಶ ಹಾಗೂ ಮಣಿಪುರದಲ್ಲಿ ವಿಧಾನಸಭಾ ಚುನಾವಣೆಗಳು ಆರಂಭಗೊಳ್ಳುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.