ಬೆಂಗಳೂರು ಬೆನ್ನಲ್ಲೇ ಚೆನ್ನೈನಲ್ಲೂ ಓಲಾ-ಉಬರ್ ಶೇರಿಂಗ್ ವ್ಯವಸ್ಥೆ ಮೇಲೆ ನಿಷೇಧ!
ಸುರಕ್ಷತಾ ಲೋಪದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಓಲಾ-ಉಬರ್ ನಲ್ಲಿನ ಶೇರಿಂಗ್ ವ್ಯವಸ್ಥೆಗೆ ನಿಷೇಧ ಹೇರಿರುವಂತೆಯೇ ಚೆನ್ನೈ ಮಹಾನಗರಿಯಲ್ಲೂ ಶೇರಿಂಗ್ ವ್ಯವಸ್ಥೆಗೆ ನಿಷೇಧ ಹೇರಲು ಚಿಂತನೆ ನಡೆಸಲಾಗುತ್ತಿದೆ.

ಚೆನ್ನೈ: ಸುರಕ್ಷತಾ ಲೋಪದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಓಲಾ-ಉಬರ್ ನಲ್ಲಿನ ಶೇರಿಂಗ್ ವ್ಯವಸ್ಥೆಗೆ ನಿಷೇಧ ಹೇರಿರುವಂತೆಯೇ ಚೆನ್ನೈ ಮಹಾನಗರಿಯಲ್ಲೂ ಶೇರಿಂಗ್ ವ್ಯವಸ್ಥೆಗೆ ನಿಷೇಧ ಹೇರಲು ಚಿಂತನೆ ನಡೆಸಲಾಗುತ್ತಿದೆ.
ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಲ್ಲಿ ಕರ್ನಾಟಕದಲ್ಲಿ ಕ್ಯಾಬ್ ಶೇರಿಂಗ್ ವ್ಯವಸ್ಥೆಯನ್ನು ನಿಷೇಧಿಸಲಾಗಿತ್ತು. ಇದೇ ಮಾದರಿಯಲ್ಲೇ ತಮಿಳುನಾಡು ಸರ್ಕಾರ ಕೂಡ ಶೇರಿಂಗ್ ವ್ಯವಸ್ಥೆಯನ್ನು ನಿಷೇಧಿಸಲು ಚಿಂತನೆಯಲ್ಲಿ ತೊಡಗಿದ್ದು, ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು 15 ಮಂದಿ ತಜ್ಞರ ಸಮಿತಿಯೊಂದನ್ನು ರಚನೆ ಮಾಡಿದೆ. ಕ್ಯಾಬ್ ಸೇವೆ ಸುರಕ್ಷತೆ ಹಾಗೂ ಕ್ಯಾಬ್ ಸೇವೆಯ ಕುರಿತಂತೆ ಈ ಸಮಿತಿ ವರದಿ ನೀಡಲಿದ್ದು, ವರದಿಯನ್ನಾಧರಿಸಿ ಸರ್ಕಾರ ಕಾರ್ ಪೂಲಿಂಗ್ ಸರ್ವಿಸ್ ಮೇಲೆ ನಿಷೇಧ ಹೇರುವ ಕುರಿತಂತೆ ನಿರ್ಣಯ ಕೈಗೊಳ್ಳಲ್ಲಿದೆ.
ಕಳೆದ ವರ್ಷದ ಫೆಭ್ರವರಿ ತಿಂಗಳಿನಲ್ಲಿ ಖ್ಯಾತ ಕ್ಯಾಬ್ ಸರ್ವಿಸ್ ಸಂಸ್ಥೆ ಓಲಾ ಮೊಟ್ಟ ಮೊದಲ ಬಾರಿಗೆ ಚೆನ್ನೈನಲ್ಲಿ ಶೇರಿಂಗ್ ಕ್ಯಾಬ್ ವ್ಯವಸ್ಥೆಯನ್ನು ಜಾರಿ ತಂದಿತ್ತು. ಇದರ ಬೆನ್ನಲ್ಲೇ ಉಳಿದ ಇತರೆ ಕ್ಯಾಬ್ ಸಂಸ್ಥೆಗಳೂ ಕೂಡ ಪೂಲಿಂಗ್ ಸರ್ವಿಸ್ ಆರಂಭಿಸಿದ್ದವು. ಇಕೋ ಫ್ರೆಂಡ್ಲಿ ಹಾಗೂ ಕಡಿಮೆ ವೆಚ್ಚದ ಪ್ರಯಾಣ ಎಂದು ಹೇಳಿ ಸಂಸ್ಥೆಗಳ ಪ್ರಚಾರ ನಡೆಸಿದ್ದವು.
ತಮಿಳುನಾಡು ಮೋಟಾರ್ ವಾಹನ ಕಾಯ್ದೆ-1989 ಅಡಿಯಲ್ಲಿ ಮಿನಿ ಬಸ್, ಓಮ್ನಿ, ಆಟೋ ರಿಕ್ಷಾ ಮತ್ತು ಕ್ಯಾಬ್ ಗಳಿಗೆ ಮಾತ್ರ ಪೂಲಿಂಗ್ ಸರ್ವಿಸ್ ಒದಗಿಸುವ ಅವಕಾಶವಿದ್ದು, ಗುತ್ತಿಗೆಯಾಧಾರಿತ ವಾಹನಗಳು ಮಾರ್ಗ ಮಧ್ಯೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಮತ್ತು ಇಳಿಸುವ ಅಧಿಕಾರ ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕಾಗಿ ಮತ್ತು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಚೆನ್ನೈನಲ್ಲಿ ಪೂಲಿಂಗ್ ಸರ್ವಿಸ್ ಕುರಿತಂತೆ ನಿರ್ಣಯ ಕೈಗೊಳ್ಳಲು ಸಮಿತಿ ರಚನೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


