ನೋಟು ನಿಷೇಧದ ನಂತರ 18 ಲಕ್ಷ ಜನರಿಂದ 4.17 ಲಕ್ಷ ಕೋಟಿ ಅನುಮಾನಾಸ್ಪದ ಠೇವಣಿ!
500, 1000 ರೂ ಗರಿಷ್ಠ ನೋಟುಗಳನ್ನು ನಿಷೇಧಿಸಿದ ಬಳಿಕ 18 ಲಕ್ಷ ಜನರು ಬ್ಯಾಂಕ್ ಗಳಲ್ಲಿ ಒಟ್ಟು 4.17 ಲಕ್ಷ ಕೋಟಿ ಅನುಮಾನಾಸ್ಪದ ಠೇವಣಿಯನ್ನಿಟ್ಟಿದ್ದಾರೆ

Published On :
ನವದೆಹಲಿ: 500, 1000 ರೂ ಗರಿಷ್ಠ ನೋಟುಗಳನ್ನು ನಿಷೇಧಿಸಿದ ಬಳಿಕ 18 ಲಕ್ಷ ಜನರು ಬ್ಯಾಂಕ್ ಗಳಲ್ಲಿ ಒಟ್ಟು 4.17 ಲಕ್ಷ ಕೋಟಿ ಅನುಮಾನಾಸ್ಪದ ಠೇವಣಿಯನ್ನಿಟ್ಟಿದ್ದಾರೆ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ಸುನಿಲ್ ಚಂದ್ರ ಹೇಳಿದ್ದಾರೆ.
18 ಲಕ್ಷ ಜನರ ಪೈಕಿ ಈ 13 ಲಕ್ಷ ಜನರಿಗೆ ಇ-ಮೇಲ್ ಮೂಲಕ ಪ್ರಶ್ನಿಸಲಾಗಿದೆ ಎಂದು ಬಜೆಟ್ ನಂತರ ನಡೆದ ವಿಚಾರ ಸಂಕಿರಣದಲ್ಲಿ ಸುನಿಲ್ ಚಂದ್ರ ಹೇಳಿದ್ದಾರೆ. 4.17 ಲಕ್ಷ ಕೋಟಿಯಷ್ಟು ಹಣ ಠೇವಣಿಗೆ ಸಂಬಂಧಿಸಿದಂತೆ 18 ಲಕ್ಷ ಜನರ ಬಗೆಗಿನ ಮಾಹಿತಿ ಲಭ್ಯವಿದ್ದು, ಈ ಪೈಕಿ 13 ಲಕ್ಷ ಜನರಿಗೆ ಅನುಮಾನಾಸ್ಪದ ಠೇವಣಿ ಬಗ್ಗೆ ಇ-ಮೇಲ್ ಎಸ್ಎಂಎಸ್ ಗಳನ್ನು ಕಳಿಸಲಾಗಿದೆ.
ನೋಟು ನಿಷೇಧದ ನಂತರ ತೆರಿಗೆ ವಂಚನೆ ನಡೆದಿರುವುದರ ಬಗ್ಗೆ ಹಾಗೂ ಅನುಮಾನಾಸ್ಪದ ಠೇವಣಿ ಇಟ್ಟಿರುವುದರ ಬಗ್ಗೆ ಮಾಹಿತಿ ಪಡೆಯಲು ಆಪರೇಷನ್ ಕ್ಲೀನ್ ಮನಿ ಅಥವಾ ಸ್ವಚ್ಚ್ ಧನ್ ಅಭಿಯಾನ್ ಹೆಸರಿನಲ್ಲಿ ಸಿಬಿಡಿಟಿ ಕಾರ್ಯಾಚರಣೆ ನಡೆಸುತ್ತಿದ್ದು, ಉಳಿದ 5 ಲಕ್ಷ ಜನರಿಗೆ ಇ-ಮೇಲ್, ಎಸ್ಎಂಎಸ್ ನ್ನು ಫೆ.3 ರಂದು ಕಳಿಸಲಾಗುತ್ತದೆ ಎಂದು ಸಿಬಿಡಿಟಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸಿಬಿಡಿಟಿCBDTDemonetisationನೋಟು ನಿಷೇಧSuspicious depositsRs 4.17 lakh croreಅನುಮಾನಾಸ್ಪದ ಠೇವಣಿ4.17 ಲಕ್ಷ ಕೋಟಿ ಠೇವಣಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


