ದೇಶ

ಮಮತಾ ಕುಲಕರ್ಣಿ ಪತಿ ಹಾಗೂ ಡ್ರಗ್ ಮಾಫಿಯಾ ಡಾನ್ ವಿಕ್ಕಿ ಗೋಸ್ವಾಮಿ ಆರೆಸ್ಟ್

ಬಾಲಿವುಡ್ ನ ಮಾಜಿ ನಟಿ ಮಮತಾ ಕುಲಕರ್ಣಿ ಪತಿ ಹಾಗೂ ಡ್ರಗ್ ಮಾಫಿಯಾದ ಡಾನ್ ವಿಕ್ಕಿ ಗೋಸ್ವಾಮಿಯನ್ನು ಕೀನ್ಯಾದಲ್ಲಿ...

ಮಮತಾ ಕುಲಕರ್ಣಿ ಪತಿ ಹಾಗೂ ಡ್ರಗ್ ಮಾಫಿಯಾ ಡಾನ್ ವಿಕ್ಕಿ ಗೋಸ್ವಾಮಿ ಆರೆಸ್ಟ್
ಮಮತಾ ಕುಲಕರ್ಣಿ
Published On :

ಮುಂಬಯಿ: ಬಾಲಿವುಡ್ ನ ಮಾಜಿ ನಟಿ ಮಮತಾ ಕುಲಕರ್ಣಿ ಪತಿ ಹಾಗೂ ಡ್ರಗ್ ಮಾಫಿಯಾದ ಡಾನ್ ವಿಕ್ಕಿ ಗೋಸ್ವಾಮಿಯನ್ನು ಕೀನ್ಯಾದಲ್ಲಿ ಬಂಧಿಸಲಾಗಿದೆ.  

ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಡ್ರಗ್ ಎನ್ ಫೋರ್ಸ್ ಮೆಂಟ್ ಅಧಿಕಾರಿಗಳು ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ದೊರೆ ವಿಕ್ಕಿಯನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ.

ಬಂಧಿಸಲುವಿಕ್ಕಿಯನ್ನು ಬಂಧಿಸಲು ಅಮೆರಿಕ ಸರ್ಕಾರ ಕೆಲವಾರು ವರ್ಷಗಳಿಂದ ಪ್ರಯತ್ನಿಸಿತ್ತು. ಈ ಹಿನ್ನೆಲೆಯಲ್ಲಿ ಸತತವಾಗಿ ತನಿಖೆ ನಡೆಸುತ್ತಿದ್ದ ತಂಡಕ್ಕೆ ವಿಕ್ಕಿ ಕೀನ್ಯಾದಲ್ಲಿರುವ ಬಗ್ಗೆ ಖಚಿತ ಸುಳಿವು ಸಿಕ್ಕಿತ್ತು.

ಈತ ಅಮೆರಿಕಾದಲ್ಲಿ ಹೆರಾಯಿನ್ ಸೇರಿದಂತೆ ಅನೇಕ ರೀತಿಯ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಇದರ ಬೆನ್ನಲ್ಲೇ ಕಾರ್ಯಾಚರಣೆ ತಂಡ ವಿಕ್ಕಿ ಇದ್ದ ಅಡಗುದಾಣದ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಂಥಹುದ್ದೇ ಪ್ರಕರಣದಲ್ಲಿ 2014 ರಲ್ಲೂ ಮೊಂಬಾಸದಲ್ಲಿ ವಿಕ್ಕಿ ಗೋಸ್ವಾಮಿಯನ್ನು ಬಂಧಿಸಲಾಗಿತ್ತು. ನಂತರ ಸ್ಥಳೀಯ ನ್ಯಾಯಾಲಯ ಆತನಿಗೆ ಜಾಮೀನು ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.