ದೇಶ

ರಜನಿಕಾಂತ್ ರಾಜಕೀಯ ಪ್ರವೇಶ ಕೇವಲ ಮಾಧ್ಯಮ ಪ್ರಚಾರವಷ್ಟೇ: ಸುಬ್ರಮಣಿಯನ್ ಸ್ವಾಮಿ

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಕೇವಲ ಮಾಧ್ಯಮ ಪ್ರಚಾರವಷ್ಟೇ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಭಾನುವಾರ ಹೇಳಿದ್ದಾರೆ...

ರಜನಿಕಾಂತ್ ರಾಜಕೀಯ ಪ್ರವೇಶ ಕೇವಲ ಮಾಧ್ಯಮ ಪ್ರಚಾರವಷ್ಟೇ: ಸುಬ್ರಮಣಿಯನ್ ಸ್ವಾಮಿ
ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ
Published On :
ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಕೇವಲ ಮಾಧ್ಯಮ ಪ್ರಚಾರವಷ್ಟೇ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿಯವರು ಭಾನುವಾರ ಹೇಳಿದ್ದಾರೆ. 
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮತ್ತೊಬ್ಬ ಸಿನಿಮಾ ನಟ ರಾಜಕೀಯ ಪ್ರವೇಶಿಸುತ್ತಿದ್ದಾರೆ. ಇದರಲ್ಲಿ ಅಂತಹ ದೊಡ್ಡದೇನಿದೆ? ರಜನಿಕಾಂತ್ ಅವರು ಉತ್ತಮ ಮಾಧ್ಯಮ ನಿರ್ವಾಹಕರನ್ನು ಹೊಂದಿರಬಹುದು. ರಜನಿಕಾಂತ್ ಪಕ್ಷ ಕಟ್ಟುವ ವಿಚಾರ ಹಾಸ್ಯವೆಂದೇ ಹೇಳಬುಹುದು. ರಜನಿಕಾಂತ್ ಅವರು ಪ್ರಸ್ತುತ ರಾಜಕೀಯ ಪ್ರವೇಶಿಸುತ್ತಿದ್ದು, ನಂತರ ಪಕ್ಷವನ್ನು ಸ್ಥಾಪನೆ ಮಾಡುತ್ತಾರೆ. ರಜನಿಕಾಂತ್ ಒಬ್ಬ ಸಿನಿಮಾ ಸ್ಟಾರ್. ರಜನಿಕಾಂತ್ ಭ್ರಷ್ಟಾಚಾರವನ್ನು ತೊಡೆದುಹಾಕಬಹುದು. ಸಿನಿಮಾ ನಟರೆಲ್ಲರೂ ಭ್ರಷ್ಟಾಚಾರವನ್ನು ತೊಡೆದುಹಾಕಲು ಸಾಧ್ಯವೇ? ತಮಿಳುನಾಡು ರಾಜ್ಯಕ್ಕೆ ರಜನಿಕಾಂತ್ ಏನು ಮಾಡುತ್ತಾರೆ? ಆ ಬಗ್ಗೆ ರಜನಿಕಾಂತ್ ಬಳಿ ಯಾವುದೇ ಮಾಹಿತಿ ಹಾಗೂ ದಾಖಲೆಗಳಿಲ್ಲ. ರಜನಿಕಾಂತ್ ಒಬ್ಬ ಅನಕ್ಷರಸ್ಥ ಎಂದು ಹೇಳಿದ್ದಾರೆ. 
ರಜನಿಕಾಂತ್ ಕೇವಲ ರಾಜಕೀಯ ಪ್ರವೇಶ ಮಾಡುವುದಾಗಿ ಅಷ್ಟೇ ಘೋಷಣೆ ಮಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ಮಾಧ್ಯಮ ಪ್ರಚಾರವಷ್ಟೇ. ಮಾಧ್ಯಮಗಳ ಮೂಲಕ ಸಿನಿಮಾ ನಟರು ರಾಜಕೀಯ ಮಾಡಲು ಸಾಧ್ಯವಿಲ್ಲ. ಪಕ್ಷ ಸ್ಥಾಪನೆ ಮಾಡಿದ ಬಳಿಕ ರಜನಿ ಅವರು ಭ್ರಷ್ಟಾಚಾರದ ವಿರುದ್ಧ ದನಿ ಎತ್ತುತ್ತಾರೆ. ಬಳಿಕ ನಾನು ಅವರ ಮುಖವನ್ನು ಬಯಲು ಮಾಡುತ್ತೇನೆ. ಸತ್ಯ ಬಹಿರಂಗಗೊಳ್ಳುತ್ತಿದ್ದಂತೆಯೇ ರಜನಿಕಾಂತ್ ಅವರು ಓಡಿಹೋಗುತ್ತಾರೆ. ರಜನಿಕಾಂತ್ ಅವರಿಗೆ ಬಿಜೆಪಿ ಬೆಂಬಲ ನೀಡುತ್ತದೆಯೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಆದರೆ, ಖಂಡಿತವಾಗಿಯೂ ನಾನು ವಿರೋಧಿಸುತ್ತೇನೆಂದು ತಿಳಿಸಿದ್ದಾರೆ. 
ಸಾಕಷ್ಟು ಬೆಳವಣಿಗೆಗಳ ಬಳಿಕ ಊಹಾಪೋಹಗಳಿಗೆ ಇಂದು ತೆರೆ ಎಳೆದಿರುವ ನಟ ರಜನಿಕಾಂತ್ ಅವರು ರಾಜಕೀಯ ಪ್ರವೇಶ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದೇ ವೇಳೆ ತಮ್ಮ ನೂತನ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಿರುವುದಾಗಿ ಘೋಷಣೆ ಮಾಡಿರುವ ಅವರು, ಸತ್ಯ, ಪ್ರಾಮಾಣಿಕ ಹಾಗೂ ಅಭಿವೃದ್ಧಿಯೇ ತಮ್ಮ ಪಕ್ಷದ ಮೂಲಮಂತ್ರವಾಗಿರುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.