ಕುಲಭೂಷಣ್ ಜಾದವ್ ಪತ್ನಿಯ ಶೂ ಸಂಶಯಾಸ್ಪದವಾಗಿತ್ತು: ಪಾಕಿಸ್ತಾನ
ಕುಲಭೂಷಣ್ ಜಾದವ್ ಭೇಟಿ ವೇಳೆ ಆತನ ಪತ್ನಿ ಧರಿಸಿದ್ದ ಶೂ ಸಂಶಯಾಸ್ಪದವಾಗಿತ್ತು ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Published On :
ಇಸ್ಲಾಮಾಬಾದ್: ಕುಲಭೂಷಣ್ ಜಾದವ್ ಭೇಟಿ ವೇಳೆ ಆತನ ಪತ್ನಿ ಧರಿಸಿದ್ದ ಶೂ ಸಂಶಯಾಸ್ಪದವಾಗಿತ್ತು ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತ ಭಾರತದ ಆರೋಪಗಳನ್ನು ಅಲ್ಲಗಳೆದಿರುವ ಪಾಕಿಸ್ತಾನ ವಿದೇಶಾಂಗ ಇಲಾಖೆ, ಕುಲಭೂಷಣ್ ಜಾದವ್ ಧರಿಸಿದ್ದ ಶೂಗಳು ಸಾಮಾನ್ಯ ಅಳತೆಗಿಂತಲೂ ಹೆಚ್ಚಾಗಿತ್ತು. ಹೀಗಾಗಿ ಶಂಕೆಯ ಮೇರೆಗೆ ಶೂಗಳನ್ನು ತೆಗೆದುಕೊಳ್ಳಲಾಗಿತ್ತು. ಬದಲಿಗೆ ಅವರಿಗೆ ಬೇರೆ ಚಪ್ಪಲಿಗಳನ್ನು ನೀಡಲಾಗಿತ್ತು. ಇನ್ನು ಅವರಿಂದ ಬಿಚ್ಚಿಸಿಕೊಂಡಿದ್ದ ಒಡವೆಗಳನ್ನೂ ಅವರಿಗೆ ವಾಪಸ್ ನೀಡಲಾಗಿದೆ. ಹೀಗಾಗಿ ಭಾರತದ ಆರೋಪದಲ್ಲಿ ಹುರುಳಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.
ಸೋಮವಾರವಷ್ಟೇ ಪಾಕಿಸ್ತಾನದಲ್ಲಿರುವ ಕುಲಭೂಷಣ್ ಜಾದವ್ ರನ್ನು ಅವರ ತಾಯಿ ಮತ್ತು ಪತ್ನಿ ಭೇಟಿ ಯಾಗಿದ್ದರು. ಈ ವೇಳೆ ಜಾದವ್ ಪತ್ನಿ ಅವರಿಂದ ಒಡವೆ, ಮಂಗಳಸೂತ್ರವನ್ನು ಪಾಕಿಸ್ತಾನ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮತ್ತು ಅವರ ಸಿಂಧೂರವನ್ನು ಅಳಿಸಿ ಹಾಕಿಸಿದ್ದರು ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿದ್ದವು. ಪಾಕಿಸ್ತಾನಿ ಅಧಿಕಾರಿಗಳ ಈ ನಡೆಯನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತೀಯ ಸಂಸ್ಕೃತಿಯನ್ನು ಪಾಕಿಸ್ತಾನಿ ಅಧಿಕಾರಿಗಳು ಅಗೌರವ ನೀಡಿದ್ದಾರೆ ಎಂದು ಆರೋಪಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


