ದೇಶ

ತೆರಿಗೆ ವಂಚನೆ: ಮಲಯಾಳಂ ನಟ ಫಹಾದ್ ಫಾಸಿಲ್ ಬಂಧನ

ದುಬಾರಿ ಕಾರಿನ ತೆರಿಗೆ ಉಳಿಸುವ ಸಲುವಾಗಿ ನಕಲಿ ವಿಳಾಸ ನೀಡಿ ಪುದುಚೇರಿಯಲ್ಲಿ ಕಾರು ಖರೀದಿಸಿದ್ದ ಮಲಯಾಳಂ ನಟ ಫಹಾದ್ ಫಾಸಿಲ್ ರನ್ನು ಕೇರಳ...

ತೆರಿಗೆ ವಂಚನೆ: ಮಲಯಾಳಂ ನಟ ಫಹಾದ್ ಫಾಸಿಲ್ ಬಂಧನ
ಫಹಾದ್ ಫಾಸಿಲ್
Published On :
ತಿರುವನಂತಪುರಂ: ದುಬಾರಿ ಕಾರಿನ ತೆರಿಗೆ ಉಳಿಸುವ ಸಲುವಾಗಿ ನಕಲಿ ವಿಳಾಸ ನೀಡಿ ಪುದುಚೇರಿಯಲ್ಲಿ ಕಾರು ಖರೀದಿಸಿದ್ದ ಮಲಯಾಳಂ ನಟ ಫಹಾದ್ ಫಾಸಿಲ್ ರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. 
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಫಹಾದ್ ಫಾಸಿಲ್ ಜಾಮೀನು ಪಡೆದು ಹೊರ ಬಂದ ಕೂಡಲೇ ಕೇರಳ ಕ್ರೈಂ ಬ್ರಾಂಚ್ ಪೊಲೀಸರು ಆರೋಪಿಯನ್ನು ಬಂಧಿಸಿ ಆತನಿಂದ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. 
ಕಳೆದ ವಾರ ಅಲಪುಳಾ ಕೋರ್ಟ್ ನಿಂದ 50 ಸಾವಿರ ಬಾಂಡ್ ಹಾಗೂ ಇಬ್ಬರ ಶೂರಿಟಿ ಪಡೆದು ಜಾಮೀನು ಪಡೆದಿದ್ದರು. 
ಪ್ರಕರಣಕ್ಕೆ ಸಂಬಂಧಿಸಿದಂತೆ ಫಹಾದ್ ಹೇಳಿಕೆ ನೀಡಿದ್ದು ಈ ಹೇಳಿಕೆ ಪರಿಶೀಲನೆ ನಂತರ ಆತನ ವಿರುದ್ಧ ಪ್ರಕರಣ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. 
ಎಸ್ ಕ್ಲಾಸ್ ಬೆಂಜ್ ಕಾರ್ ಖರೀದಿಸುವ ಸಲುವಾಗಿ ಕೇರಳ ಮೂಲದ ಫಹಾದ್ ಫಾಸಿಲ್ ಅಲಪುಳಾ ವಿಳಾಸ ನೀಡಿ ಪುದುಚೇರಿಯಲ್ಲಿ ಕಾರು ಖರೀದಿಸಿದ್ದರು. ಇನ್ನು ಕೇರಳದಲ್ಲಿ 20 ಲಕ್ಷ ರೂ. ಮೇಲ್ಪಟ್ಟ ವಿಲಾಸಿ ಕಾರು ಖರೀದಿಸುವುದಕ್ಕೆ ಶೇ.20ರಷ್ಟು ತೆರಿಗೆ ಪಾವತಿಸಬೇಕಿದೆ. ಈ ತೆರಿಗೆಯನ್ನು ತಪ್ಪಿಸುವ ಸಲುವಾಗಿ ಫಹಾದ್ ರೀತಿ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.