ದೇಶ

ಉಗ್ರರಿಗೆ ಆರ್ಥಿಕ ನೆರವು: ಗಿಲಾನಿ ಪುತ್ರನಿಗೆ ಸಮನ್ಸ್ ಜಾರಿ ಮಾಡಿದ ಎನ್ಐಎ

ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸುವ ಸಲುವಾಗಿ ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯತ್ ಪ್ರತ್ಯೇಕತಾವಾದಿ ಸೈಯ್ಯದ್ ಅಲಿ ಶಾ ಗಿಲಾನಿಯವರ ಪುತ್ರನಿಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶನಿವಾರ...

ಉಗ್ರರಿಗೆ ಆರ್ಥಿಕ ನೆರವು: ಗಿಲಾನಿ ಪುತ್ರನಿಗೆ ಸಮನ್ಸ್ ಜಾರಿ ಮಾಡಿದ ಎನ್ಐಎ
ಹುರಿಯತ್ ಪ್ರತ್ಯೇಕತಾವಾದಿ ಸೈಯ್ಯದ್ ಅಲಿ ಶಾ ಗಿಲಾನಿ
Published On :
ನವದೆಹಲಿ: ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸುವ ಸಲುವಾಗಿ ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹುರಿಯತ್ ಪ್ರತ್ಯೇಕತಾವಾದಿ ಸೈಯ್ಯದ್ ಅಲಿ ಶಾ ಗಿಲಾನಿಯವರ ಪುತ್ರನಿಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶನಿವಾರ ಸಮನ್ಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ. 
ಗಿಲಾನಿಯವರ ಪುತ್ರ ನಸೀಮ್ ಗಿಲಾನಿಯವರಿಗೆ ಎನ್ಐಎ ಅಧಿಕಾರಿಗಳು ಸಮನ್ಸ್ ಮಾಡಿದ್ದು, ಪ್ರಕರಣ ಸಂಬಂಧ ವಿಚಾರಣೆ ನಡೆಸುವ ಅಗತ್ಯವಿದ್ದು, ವಿಚಾರಣೆಗಾಗಿ ದೆಹಲಿಗೆ ಆಗಮಿಸುವಂತೆ ಸೂಚಿಸಿದ್ದಾರೆಂದು ವರದಿಗಳು ತಿಳಿಸಿವೆ. 
ನಸೀಮ್ ಶ್ರೀನಗರದಲ್ಲಿರುವ ಶೆರ್-ಇ-ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
ಸಮನ್ಸ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಎನ್ಐಎ ಅಧಿಕಾರಿಗಳು, ಗಿಲಾನಿ ಪುತ್ರ ನಸೀಮ್ ಗಿಲಾನಿಯವರಿಗೆ ನಾವು ಸಮನ್ಸ್ ಜಾರಿದ್ದು, ಮುಂದಿನ ವಾರ ದೆಹಲಿಯಲ್ಲಿರುವ ಎನ್ಐಎ ಪ್ರಧಾನ ಕಚೇರಿಗೆ ಆಗಮಿಸುವಂತೆ ಸೂಚಿಸಿದ್ದೇವೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.