ದೆಹಲಿ ಮೆಟ್ರೋ ಮೆಜೆಂತಾ ಲೈನ್ ಉದ್ಘಾಟಿಸಲಿರುವ ಪ್ರಧಾನಿ ಮೋದಿ: ಕೇಜ್ರಿವಾಲ್‌ಗೆ ಇಲ್ಲ ಆಹ್ವಾನ!
ದೆಹಲಿಯಲ್ಲಿ ಮೆಟ್ರೋದ ಮುಂದುವರೆದ ಭಾಗವಾಗಿರುವ ಮೆಜೆಂತಾ ಲೈನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಡಿಸೆಂಬರ್ 25ಕ್ಕೆ ಚಾಲನೆ ನೀಡಲಿದ್ದು...

Published On :
ನವದೆಹಲಿ: ದೆಹಲಿಯಲ್ಲಿ ಮೆಟ್ರೋದ ಮುಂದುವರೆದ ಭಾಗವಾಗಿರುವ ಮೆಜೆಂತಾ ಲೈನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಡಿಸೆಂಬರ್ 25ಕ್ಕೆ ಚಾಲನೆ ನೀಡಲಿದ್ದು ಈ ಕಾರ್ಯಕ್ರಮಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಆಹ್ವಾನ ನೀಡಲಾಗಿಲ್ಲ.
ಮೆಜೆಂತಾ ಮೆಟ್ರೋ ಲೈನ್ ಉದ್ಘಾಟನೆ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ಜಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಜ್ರಿವಾಲ್ ಅವರಿಗೆ ಆಹ್ವಾನ ಕುರಿತು ಯಾವುದೇ ರೀತಿಯ ಆಹ್ವಾನವನ್ನು ಕಾರ್ಯಾಲಯ ಸ್ವೀಕರಿಸಿಲ್ಲ ಎಂದು ದೆಹಲಿ ಸರ್ಕಾರದ ವಕ್ತಾರರು ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ನಮಗೆ ಅಧಿಕೃತ ಆಹ್ವಾನ ಬಂದಿಲ್ಲ. ನಮ್ಮ ಉನ್ನತ ಆದ್ಯತೆಯು ಪ್ರಯಾಣಿಕರಿಗೆ ಕಡಿಮೆ ಬೆಲೆಯಲ್ಲಿ ಸುರಕ್ಷಿತ ಮೆಟ್ರೋ ಸೇವೆ ನೀಡುವುದೇ ಆಗಿದೆ. ಇಲ್ಲಿಯವರೆಗೂ ನಾವು ಯಾವುದೇ ಆಮಂತ್ರಣವನ್ನು ಸ್ವೀಕರಿಸಿಲ್ಲ ಎಂದು ಹೇಳಿದರು.
ದೆಹಲಿಯ ಜನಕಪುರಿಯಿಂದ ನೋಯ್ಡಾದವರೆಗೆ ಮೆಜೆಂತಾ ಮೆಟ್ರೋ ಲೈನ್ ನಿರ್ಮಿಸಲಾಗಿದ್ದು ಇದೇ ಡಿಸೆಂಬರ್ 25ಕ್ಕೆ ಕ್ರಿಸ್ ಮಸ್ ಹಬ್ಬದ ದಿನ ಪ್ರಧಾನಿ ಮೋದಿ ಅವರು ಉದ್ಘಾಟಿಸಲಿದ್ದಾರೆ. ಹೊಸ ಮಾರ್ಗ ದೆಹಲಿ ನೋಯ್ಡಾ ಮತ್ತು ದಕ್ಷಿಣ ದೆಹಲಿಯ ಪ್ರಯಾಣದ ವೇಳೆ ಕಡಿಮೆಯಾಗಲಿದ್ದು ದೆಹಲಿಯ ಹೊರಗೆ ಮೊದಲ ಇಂಟರ್ ಚೇಂಜ್ ಆಗಿ ಬಟಾನಿಕಲ್ ಗಾರ್ಡನ್ ಸ್ಪೇಷನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಕಳೆದ ವಾರ ಇದೇ ಮೆಜೆಂತಾ ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ನಡೆಸುತ್ತಿದ್ದ ವೇಳೆ ಕಾಳಿಂದಿ ಕುಂಜ್ ಡಿಪೋದಲ್ಲಿ ರೈಲು ಗೋಡೆಗೆ ಗುದ್ದಿತ್ತು. ಈ ಪ್ರಕರಣ ಆತಂಕಕ್ಕೆ ಕಾರಣವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿಅರವಿಂದ್ ಕೇಜ್ರಿವಾಲ್Arvind KejriwalDelhi Metroದೆಹಲಿ ಮೆಟ್ರೋMagenta Lineಮೆಜೆಂತಾ ಲೇನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


