ದೆಹಲಿ: ರೋಹಿಣಿ ಆಶ್ರಮದಲ್ಲಿ ಅಕ್ರಮ ಬಂಧನದಲ್ಲಿದ್ದ 40ಕ್ಕೂ ಹೆಚ್ಚು ಯುವತಿಯರ ರಕ್ಷಣೆ
ದೆಹಲಿಯ ರೋಹಿಣಿ ಆದ್ಯಾತ್ಮಿಕ ವಿಶ್ವ ವಿದ್ಯಾನಿಲಯದಲ್ಲಿ ಅಕ್ರಮವಾಗಿ ಬಂಧಿಗಳಾಗಿದ್ದ 40ಕ್ಕೂ ಹೆಚ್ಚು ಯುವತಿಯರನ್ನು ಪೋಲೀಸರು ರಕ್ಷಿಸಿದ್ದಾರೆ.

Published On :
ನವದೆಹಲಿ: ದೆಹಲಿಯ ರೋಹಿಣಿ ಆದ್ಯಾತ್ಮಿಕ ವಿಶ್ವ ವಿದ್ಯಾನಿಲಯದಲ್ಲಿ ಅಕ್ರಮವಾಗಿ ಬಂಧಿಗಳಾಗಿದ್ದ 40ಕ್ಕೂ ಹೆಚ್ಚು ಯುವತಿಯರನ್ನು ಪೋಲೀಸರು ರಕ್ಷಿಸಿದ್ದಾರೆ.
ಡೆಲ್ಲಿ ಕಮಿಷನ್ ಆಫ್ ಉಮನ್ (ಡಿಸಿಡಬ್ಲ್ಯೂ) ಸಂಘಟನೆ ಹಾಗೂ ಪೋಲೀಸರು ನಿನ್ನೆ ಆಶ್ರಮದ ಮೇಲೆ ದಾಳಿ ನಡೆಸಿದಾಗ ಯುವತಿಯರು ಅಕ್ರಮ ಗೃಹಬಂಧನದಲ್ಲಿರುವುದು ತಿಳಿದು ಬಂದಿದೆ. ಈ ಸಂಬಂಧ ಆಶ್ರಮದ ಮುಖ್ಯಸ್ಥ ಬಾಬಾ ವೀರೇಂದ್ರ ದೇವ್ ದೀಕ್ಷಿತ್ ಅವರನ್ನು ಬಂಧಿಸುಂತೆ ಡಿಸಿಡಬ್ಲ್ಯು ಆಗ್ರಹಿಸಿದೆ.
"13 ವರ್ಷದ ಬಾಲಕಿಯೊಬ್ಬಳು ತನ್ನ ಮೇಲೆ ಬಾಬಾ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದು ಅಂತಹ ಬಾಬಾರವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಇದು ಸಕಾಲ." ಎಂದು ಡಿಸಿಡಬ್ಲ್ಯು ಮುಖ್ಯಸ್ಥೆ ಸ್ವಾತಿ ಹೇಳಿದ್ದಾರೆ.
ಈ ಆಶ್ರಮವನ್ನು ನಡೆಸುತ್ತಿರುವ ವೀರೇಂದ್ರ ದೇವ್ ದೀಕ್ಷಿತ್ ಸ್ವಯಂಘೋಷಿತ ದೇವ ಮಾನವ ಆಗಿದ್ದು ಆಶ್ರಮದಲ್ಲಿ 16 ಸಾವಿರ ಮಹಿಳೆಯರಿರಬೇಕು ಎನ್ನುವ ಗುರಿ ಹೊಂದಿದ್ದ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Delhi PoliceDelhi Commission for Women (DCW)Rohini’s Adhyatmik Vishwa VidyalayaBaba Virender Dikshitಡೆಲ್ಲಿ ಕಮಿಷನ್ ಆಫ್ ಉಮನ್ (ಡಿಸಿಡಬ್ಲ್ಯೂ)ದೆಹಲಿ ಪೋಲೀಸರುರೋಹಿಣಿ ಆದ್ಯಾತ್ಮಿಕ ವ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


