ಪತ್ನಿ ಕೊಲೆ: ಮಾಜಿ ಕ್ರೈಂ ಶೋ ನಿರೂಪಕ ಸುಹೈಬ್ ಇಲಿಯಾಸ್ಗೆ ಜೀವಾವಧಿ ಶಿಕ್ಷೆ
ಪತ್ನಿ ಕೊಲೆಗೆ ಸಂಬಂಧಿಸಿದಂತೆ ಇಂಡಿಯಾಸ್ ಮೋಸ್ಟ್ ವಾಂಟೆಡ್ ಕ್ರೈಂ ಶೋ ನಡೆಸಿಕೊಡುತ್ತಿದ್ದ ಮಾಜಿ ನಿರೂಪಕ, ನಿರ್ಮಾಪಕ ಸುಹೈಬ್ ಇಲಿಯಾಸ್ ಗೆ ನ್ಯಾಯಾಲಯ...

Published On :
ನವದೆಹಲಿ: ಪತ್ನಿ ಕೊಲೆಗೆ ಸಂಬಂಧಿಸಿದಂತೆ ಇಂಡಿಯಾಸ್ ಮೋಸ್ಟ್ ವಾಂಟೆಡ್ ಕ್ರೈಂ ಶೋ ನಡೆಸಿಕೊಡುತ್ತಿದ್ದ ಮಾಜಿ ನಿರೂಪಕ, ನಿರ್ಮಾಪಕ ಸುಹೈಬ್ ಇಲಿಯಾಸ್ ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
17 ವರ್ಷಗಳ ಹಳೆಯ ಪ್ರಕರಣ ಸಂಬಂಧ ದೆಹಲಿ ನ್ಯಾಯಾಲಯ ನ್ಯಾಯಾಧೀಶರಾದ ಎಸ್ಕೆ ಮಲ್ಹೋತ್ರಾ ಅಪರಾಧಿ ಸುಹೈಬ್ ಇಲಿಯಾಸ್ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
2000 ಜನವರಿಯಲ್ಲಿ ಪೂರ್ವ ದೆಹಲಿಯಲ್ಲಿನ ನಿವಾಸದಲ್ಲಿ ಸುಹೈಬ್ ಇಲಿಯಾಸ್ ಪತ್ನಿ ಅಂಜು ಇಲಿಯಾಸ್ ಮೃತದೇಹ ಪತ್ತೆಯಾಗಿತ್ತು. ಮೃತದೇಹದ ಮೇಲೆ ಕೆಲ ಚೂರಿ ಇರಿತ ಗಾಯಗಳಾಗಿದ್ದವು. ಪತ್ನಿ ಸಾವಿಗೆ ಸಂಬಂಧಿಸಿದಂತೆ ಸುಹೈಬ್ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತನಿಖೆ ನಡೆಸಿದ ಪೊಲೀಸರು ಮಾರ್ಚ್ ನಲ್ಲಿ ಸುಹೈಬ್ ನನ್ನು ಬಂಧಿಸಿ ಆತನ ವಿರುದ್ಧ ವರದಕ್ಷಿಣೆ ಪ್ರಕರಣವನ್ನು ದಾಖಲಿಸಲಾಗಿತ್ತು.
ಪ್ರಕರಣಕ್ಕೂ ಮುನ್ನ ಸುಹೈಬ್ ಇಂಡಿಯಾಸ್ ಮೋಸ್ಟ್ ವಾಂಟೆಡ್ ಟಿವಿ ಕಾರ್ಯಕ್ರಮಕ್ಕೆ ನಿರೂಪಣೆ ಮಾಡುತ್ತಿದ್ದರು. ಅಂಜು ಇಲಿಯಾಸ್ ರನ್ನು ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದು ಆಕೆಯ ತಾಯಿ ಮತ್ತು ನಾದಿನಿ ಆರೋಪಿಸಿದ್ದರಿಂದ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
New DelhiಜೀವಾವಧಿLife imprisonmentSuhaib IlyasiIndia s Most Wantedwife murderಸುಹೈಬ್ ಇಲಿಯಾಸ್ಇಂಡಿಯಾಸ್ ಮೋಸ್ಟ್ ವಾಂಟೆಡ್ಪತ್ನಿ ಕೊಲೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


