ದೇಶ

ಒಡಿಶಾ: ಶಿಕ್ಷಕನಿಗೆ ವಿದ್ಯಾರ್ಥಿಗಳಿಂದ ಮಸಾಜ್, ಪಾತ್ರೆ ತೊಳೆಯುವ ವಿಡಿಯೋ ವೈರಲ್

ಒಡಿಶಾದ ಮಯುರ್ ಭಂಜ್ ಜಿಲ್ಲೆಯ ಬರಿಪಡನಲ್ಲಿರುವ ಕಲಮ್ ಗಡಿಯಾ ಯುಜಿಎಂಇ ಶಾಲೆಯ ಸಹಾಯಕ ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಂದ....

ಒಡಿಶಾ: ಶಿಕ್ಷಕನಿಗೆ ವಿದ್ಯಾರ್ಥಿಗಳಿಂದ ಮಸಾಜ್, ಪಾತ್ರೆ ತೊಳೆಯುವ ವಿಡಿಯೋ ವೈರಲ್
ಮಸಾಜ್ ಮಾಡುತ್ತಿರುವ, ಪಾತ್ರೆ ತೊಳೆಯುತ್ತಿರುವ ವಿದ್ಯಾರ್ಥಿಗಳು
Published On :
ಬರಿಪಡ: ಒಡಿಶಾದ ಮಯುರ್ ಭಂಜ್ ಜಿಲ್ಲೆಯ ಬರಿಪಡನಲ್ಲಿರುವ ಕಲಮ್ ಗಡಿಯಾ ಯುಜಿಎಂಇ ಶಾಲೆಯ ಸಹಾಯಕ ಶಿಕ್ಷಕನೊಬ್ಬ ವಿದ್ಯಾರ್ಥಿಗಳಿಂದ ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಂಡಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. 
ವೈರಲ್ ಆಗಿರುವ ಮೂರು ವಿಡಿಯೋಗಳಲ್ಲಿ ಸಹಾಯಕ ಶಿಕ್ಷಕ ರಬಿಂದ್ರ ಕುಮಾರ್ ಬೆಹೆರಾ ಮತ್ತು ಶಾಲಾ ಹಾಸ್ಟೇಲ್ ನ ಸೂಪರಿಂಟೆಂಡೆಂಟ್ ಅಪ್ರಾಪ್ತ ಮಕ್ಕಳಿಂದ ಅಡುಗೆ ಕೆಲಸ ಮತ್ತು ಪಾತ್ರೆ ತೊಳೆಯುತ್ತಿರುವುದು ಸೆರೆಯಾಗಿದೆ. ಮತ್ತೊಂದು ವಿಡಿಯೋದಲ್ಲಿ ಬೆಹೆರಾ ಶಾಲಾ ಕೊಠಡಿಯಲ್ಲೇ ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯ ವೈರಲ್ ಆಗಿದೆ.
ಶಿಕ್ಷಕರು ಶಾಲೆಯಲ್ಲಿ ನಿದ್ದೆ ಮಾಡುವುದು ಸಾಮಾನ್ಯ. ಒಂದು ವೇಳೆ ಅವರ ನಿದ್ದೆಗೆ ಯಾರಾದರೂ ತೊಂದರೆ ಕೊಟ್ಟರೆ ಅಂತಹ ಮಕ್ಕಳಿಗೆ ಬೆಹೆರಾ ಶಿಕ್ಷೆ ನೀಡುತ್ತಾರೆ ಎಂದು ಹೆಸರು ಹೇಳಲು ಇಚ್ಚಿಸಿದ ಮಕ್ಕಳು ತಿಳಿಸಿದ್ದಾರೆ.
ತರಗತಿ ವೇಳೆ ಮತ್ತು ರಾತ್ರಿ ಹಾಸ್ಟೇಲ್ ನಲ್ಲಿ ಮಲಗುವ ವೇಳೆ ಮಸಾಜ್ ಮಾಡುವಂತೆ ನಮಗೆ ಬಲವಂತ ಮಾಡುತ್ತಾರೆ. ಅಲ್ಲದೆ ಇದನ್ನು ಯಾರಿಗೂ ಹೇಳಬೇಡಿ, ಹೇಳಿದ್ರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ ನೀಡಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಈ ಸರ್ಕಾರಿ ಶಾಲೆಯಲ್ಲಿ ಒಂದರಿಂದ ಏಳನೆ ತರಗತಿ ವರೆಗೆ 165 ವಿದ್ಯಾರ್ಥಿಗಳಿದ್ದು, ಆ ಪೈಕಿ 40 ವಿದ್ಯಾರ್ಥಿಗಳು ಹಾಸ್ಟೇಲ್ ನಲ್ಲಿ ವಾಸವಾಗಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.